
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ರಾಜ್ಯದಾದಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಲಾಗಿರುವ ದೂರಸ್ಥ ಮಳೆ ಮಾಪನ ಕೇಂದ್ರಗಳಲ್ಲಿ ದಿನಾಂಕ 29-07-2025ರ ಬೆಳಗ್ಗೆ 8.30ರ ಅನ್ವಯ ದಾಖಲಾದ ಮಳೆ ಪ್ರಮಾಣದ ಅನ್ವಯ ಕೆಳಕಂಡಂತೆ, ಜಿಲ್ಲಾವಾರು ಮಳೆ ಹಂಚಿಕೆಯು ಕಂಡುಬಂದಿರುತ್ತದೆ.
ವ್ಯಾಪಕ ಮಳೆ: ರಾಜ್ಯದ 04 ಜಿಲ್ಲೆಗಳು (ಕೊಡಗು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ),
ಸಾಧಾರಣ ವ್ಯಾಪಕ ಮಳೆ: ರಾಜ್ಯದ 02 ಜಿಲ್ಲೆಗಳು (ಚಿಕ್ಕಮಗಳೂರು ಮತ್ತು ಶಿವಮೊಗ್ಗ).
ಅಲ್ಲಲ್ಲಿ ಚದುರಿದಂತೆ: ರಾಜ್ಯದ 04 ಜಿಲ್ಲೆಗಳು (ಹಾಸನ, ಬೆಳಗಾವಿ, ಧಾರವಾಡ ಮತ್ತು ಮೈಸೂರು).
ಕೆಲವೆಡೆ: ರಾಜ್ಯದ 11 ಜಿಲ್ಲೆಗಳು (ಗದಗ, ಬೀದರ್, ಹಾವೇರಿ, ವಿಜಯಪುರ, ಚಾಮರಾಜನಗರ, ತುಮಕೂರು, ಕಲ್ಕುರಗಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ).
ಅತ್ಯಲ್ಪಮಳೆ/ಒಣಹವೆ: ರಾಜ್ಯದ 10 ಜಿಲ್ಲೆಗಳು (ಬೆಂಗಳೂರು ನಗರ, ರಾಮನಗರ, ವಿಜಯನಗರ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೋಲಾರ ಮತ್ತು ಕೊಪ್ಪಳ).
ಗರಿಷ್ಟ ಮಳೆ: 76. ಮಿ.ಮೀ. (ಮದ, ಗ್ರಾಮಪಂಚಾಯತಿ, ಮಡಿಕೇರಿ, ತಾಲೂಕು, ಕೊಡಗು, ಜಿಲ್ಲೆ)
ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪಕ್ಕದ ಭಾಗಗಳಲ್ಲಿ ಸಾಮಾನ್ಯ ಮುಂಗಾರು ಪರಿಸ್ಥಿತಿ ಕಂಡು ಬಂದಿರುತ್ತದೆ. ಉತ್ತರಒಳನಾಡು ಮತ್ತು ದಕ್ಷಿಣಒಳನಾಡು ಜಿಲ್ಲೆಗಳಲ ದುರ್ಬಲ ಮುಂಗಾರು ರಾಜ್ಯದಾದಂತ ಕಂಡು ಬಂದಿರುತ್ತದೆ.
ಒಟ್ಟರೆ ರಾಜ್ಯದಲ್ಲಿ ಅಲ್ಲಲ್ಲಿ ಚದುರಿದಂತೆ ಮಾತ್ರ ಮಳೆ ಕಂಡು ಬಂದಿರುತ್ತದೆ