ತುಮಕೂರಿನಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ..
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರ ಜೊತೆ ಸಭೆ ಕರೆದ ವಿಚಾರ..
ಸಿದ್ದರಾಮಯ್ಯ ಕಾಂಗ್ರೆಸ್ ನ ಶಾಸಕರನ್ನ ಸಭೆ ಕರೆದಿದ್ದಾರೆ.
ಕಾಂಗ್ರೆಸ್ ನವರೇ ಕರ್ನಾಟಕವನ್ನ ಆಳ್ತಾ ಇದ್ದಾರೆ ಅನ್ನೊ ಹಾಗೆ ಕರೆದಿದ್ದಾರೆ..
ಎಲ್ಲಾ ಶಾಸಕರನ್ನ ಸಭೆಗೆ ಕರೆಯಬೇಕಿತ್ತು..
ಏನ್ ಬರೀ ಕಾಂಗ್ರೇಸ್ ನವರನ್ನೆ ಕರೆದಿರೋದು..?
ಕರ್ನಾಟಕ ಸಮಗ್ರ ಅಭಿವೃದ್ಧಿ ಅಗಬೇಕು ಅಂದ್ರೆ..
ಎಲ್ಲಾ ಶಾಸಕರನ್ನ ಕರೆದು ಅನುದಾನ ಕೊಡೊದರ ಬಗ್ಗೆ ಮಾತಾಡಬೇಕಿತ್ತು..
ಈ ತಾರತಮ್ಯ ಸಿದ್ದರಾಮಯ್ಯ ನಿಗೆ ಯಾಕೋ.
ಸಿದ್ದರಾಮಯ್ಯ ಹೋಗೋ ಕಾಲದಲ್ಲಿ ಕೇಡು ಗಾಲಕ್ಕೆ ನಾಯಿ ಮೊಟ್ಟೆ ಇಡ್ತು ಅಂತ ಹೇಳ್ತಾರಲ್ಲ..
ಹಾಗಾಗಿ ಸಿದ್ದರಾಮಯ್ಯ ಇಳಿಯೋ ಕಾಲದಲ್ಲಿ ಇಂತಹ ಆರೊಪ ತಗೊಳ್ತಿದ್ದಾರೆ..
50 ಕೋಟಿ ಅನುದಾನ ಕೊಡ್ತಿವಿ ಅಂತಾ ಹೇಳಿದ್ದಾರೆ…
ಅದರಲ್ಲೂ ತಾರತಮ್ಯ ಮಾಡಿದ್ರೆ ಅಸೆಂಬ್ಲಿ ನಡೆಯೋಕೆ ಬಿಡಲ್ಲಾ ಅಂತಾ ಅಶೋಕ್ ಅವರಿಗೆ ಹೇಳಿದಿವಿ..
50 ಕೋಟಿ ಅನುದಾನ ಎಲ್ಲರಿಗೂ ಸಮಾನವಾಗಿ ಹಂಚಬೇಕು..
ಬಜೆಟ್ ಬುಕ್ ನಲ್ಲು ಘೋಷಣೆ ಆಗಿದೆ…
ಅದೇನಾದ್ರೂ ಕೊಟ್ಟಿಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಅಸೆಂಬ್ಲಿ ನಡೆಯೋಕ್ಕೆ ಬಿಡಲ್ಲ..
*ಡಿಸಿಎಂ ಡಿಕೆಶಿ ಶಾಸಕರನ್ನ ಸಭೆಗೆ ಕರೆದಿರುವ ವಿಚಾರ..*
ಕಾಂಗ್ರೆಸ್ ಸತ್ತೋಗಿದೆ… ಹೇಳಿದ್ನಲ್ಲರಿ..
ಕರ್ನಾಟಕದ ಪಾಲಿಗೆ ಸತ್ತು ಮಲಗಿದೆ..
ಬರಿ ಪೇಪರ್ ಮೇಲಿದೆ,ಹಣನೂ ಇಲ್ಲಾ ಏನೂ ಇಲ್ಲಾ…
ಸುಮ್ಮನೆ ಮೀಟಿಂಗ್ ಮಾಡಿ ತಿಪ್ಪೆ ಸಾರಿಸುತ್ತಿದ್ದಾರೆ..
ಡಿಕೆ ಶಿವಕುಮಾರ್ ನಾನು ಮುಖ್ಯಮಂತ್ರಿ ಆಗಬೇಕು ಅಂತಾ..
ಸಿದ್ದರಾಮಯ್ಯ ನಾನೇ ಉಳಕೋ ಬೇಕು ಅಂತಾ…
ಅದರ ಮದ್ಯೆ ಮಲ್ಲಿಕಾರ್ಜುನ್ ಖರ್ಗೆ ನಾನ್ ಬರ್ತಿನಿ ಅಂತಾ ಮದ್ಯೆ ಬಂದು ಕುಳಿತಿದಾರೆ..
ಕಾಂಗ್ರೇಸ್ ಮೂರು ಬಾಗಿಲಲ್ಲ 10 ಬಾಗಿಲಾಗಿ ಕುಳಿತಿದೆ..
ಇವತ್ತು ಎಲೆಕ್ಷನ್ ಗೆ ಹೋದ್ರೆ 150 ಸೀಟು ಬೀಜೆಪಿ ಬರುತ್ತೆ..
ಕಾಂಗ್ರೇಸ್ ನವರು ಭ್ರಮೆಯಲ್ಲಿದ್ದಾರೆ…ಕನ್ನಡಿಯಲ್ಲಿ ಅವರ ಮುಸಡಿ ನೋಡಿಕೊಳ್ಳೊಕೆ ಹೇಳಿ..
ಅವರ ಯೋಗ್ಯತೆ ಗೊತ್ತಾಗಲಿದೆ..
ಎನ್ ಸಾಧನೆ ಮಾಡಿದ್ದಾರೆ ಅಂತಾ ಸಾದನ ಸಮಾವೇಶ ಮಾಡ್ತಾರೆ…
5 ರೂ ಹಣ ಕೊಟ್ಟಿಲ್ಲ, ಒಂದು ರೂಪಾಯಿ ಕೆಲಸ ಆಗಿಲ್ಲಾ..
ಕ್ಷೇತ್ರದಲ್ಲಿ ಮುಖ ಎತ್ತಿಕೊಂಡು ತಿರುಗೋಕೆ ಆಗ್ತಾ ಇಲ್ಲಾ..
ಇಂತಹ ದರಿದ್ರ ಸರ್ಕಾರನಾ ನನ್ನ ಜೀವನದಲ್ಲೂ ನೋಡಿರಲಿಲ್ಲ..