ಕ್ವಾಂಟಮ್ ಇಂಡಿಯಾ ಬೆಂಗಳೂರು 2025 ಉದ್ಘಾಟನಾ ಸಮಾರಂಭ – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯಾಂಶಗಳು
ಜುಲೈ 31,2025, ಸ್ಥಳ : ದಿ ಹಿಲ್ಟನ್, ಎಂಬೆಸ್ಸಿ ಮಾನ್ಯತಾ ಬಿಸಿನೆಸ್ ಪಾರ್ಕ್ ಬೆಂಗಳೂರು. 1. ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕರ್ನಾಟಕದ ನಾಯಕತ್ವದ ಗುರುತಾಗಿರುವ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿರುವ ಕ್ವಾಂಟಮ್ ಇಂಡಿಯಾ ಬೆಂಗಳೂರು 2025* ನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. 2. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತರು, ವಿಜ್ಞಾನಿಗಳು, ತಜ್ಞರು ಸೇರಿದಂತೆ ಭಾರತ ಮತ್ತು ಅಂತರಾಷ್ಟ್ರೀಯ ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ ಕೋರುತ್ತೇನೆ. 3. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐ ಐ ಎಸ್ಸಿ ಕ್ವಾಂಟಮ್ ಟೆಕ್ನಾಲಜಿ ಇನಿಷಿಯೇಟಿವ್ ಹಾಗೂ ರಾಷ್ಟ್ರೀಯ ಕ್ವಾಂಟಮ್ ಮಿಷನ್ ಸಹಯೋಗದೊಂದಿಗೆ ಆಯೋಜಿಸಿರುವ ಈ ಕಾರ್ಯಕ್ರಮ ಭಾರತದ ಕ್ವಾಂಟಮ್ ಪಯಣದಲ್ಲಿ ಒಂದು ಮೈಲಿಗಲ್ಲು. 4. ಈ ವೇದಿಕೆಯನ್ನು ಸಹಯೋಗ, ನಾವೀನ್ಯತೆ ಮತ್ತು ರಿಯಲ್ ವರ್ಲ್ಡ್ ಕ್ವಾಂಟಮ್ ಅಪ್ಲಿಕೇಶನ್ಸ್ ನ ಜಾಗತಿಕ ಕೇಂದ್ರವಾಗಿಸುವುದು ನಮ್ಮ ಉದ್ದೇಶವಾಗಿದೆ. 5. ಕ್ವಾಂಟಮ್ ಯುಗಕ್ಕೆ ಒಟ್ಟಾಗಿ ಜಗತ್ತನ್ನು ಮುನ್ನಡೆಸಲು ಕರ್ನಾಟಕ ಹಾಗೂ ಭಾರತ ಸಿದ್ಧವಾಗಿದೆ ಎಂದು ಹೆಮ್ಮೆಯಿಂದ ಇಂದು ಘೋಷಿಸುತ್ತೇನೆ. 6. ಐಟಿ, ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಮುಂಚಿನಿಂದಲೂ ಸಮರ್ಥ ವಾಗಿರುವ ಕರ್ನಾಟಕ, ಭಾರತದ ತಂತ್ರಜ್ಞಾನ ಮತ್ತು ನಾವಿನ್ಯತೆಯ ರಾಜಧಾನಿಯಾಗಿದೆ. 7. “ಕ್ವಾಂಟಮ್ ಪರಿಸರ ವ್ಯವಸ್ಥೆಯ ನಿರ್ಮಾಣ: ಸಮಾಜಕ್ಕೆ ಕ್ಯುಬಿಟ್ಸ್ಸಿ” ಎಂಬ ವಿಷಯವು ಕ್ವಾಂಟಮ್ ಸಂಶೋಧನೆಯನ್ನು ಆರೋಗ್ಯ, ರಕ್ಷಣಾ, ಆರ್ಥಿಕ ಮತ್ತು ಆಡಳಿತ ವ್ಯವಸ್ಥೆಗೆ ಪರಿಹಾರಗಳನ್ನು ಕಂಡುಕೊಳ್ಳಲು ನಮಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 8. 2025ನ್ನು ಕ್ವಾಂಟಮ್ ನ ಅಂತರರಾಷ್ಟ್ರೀಯ ವರ್ಷ ಎಂದು ವಿಶ್ವದಾದ್ಯಂತ ಆಚರಣೆ ಮಾಡುತ್ತಿರುವ ಹೊತ್ತಿನಲ್ಲಿ ಕರ್ನಾಟಕದ ಕ್ವಾಂಟಮ್ ವಿಷನ್ 2035 ನ್ನು ಘೋಷಿಸಲು ನನಗೆ ಹೆಮ್ಮೆ ಎನಿಸುತ್ತದೆ. 9. 20 ಬಿಲಿಯನ್ ಡಾಲರ್ ಕ್ವಾಂಟಮ್ ಆರ್ಥಿಕತೆಯನ್ನು ನಿರ್ಮಾಣ ಮಾಡುವ ಮೂಲಕ ಉದ್ಯೋಗ ಸೃಷ್ಟಿ, ಕೈಗಾರಿಕೆಗಳು ಹಾಗೂ ಸಮಾಜಕ್ಕೆ ಪ್ರಯೋಜನಕಾರಿಯಾದ ಸಂಶೋಧನೆಯನ್ನು ಕೈಗೊಳ್ಳುವುದು ನಮ್ಮ ಗುರಿ. 10. ಇದನ್ನು ಸಾಧಿಸಲು, ನಾವು ಆರ್ & ಡಿ, ಕೌಶಲ್ಯ, ಮೂಲಸೌಕರ್ಯ ಮತ್ತು ಸ್ಟಾರ್ಟ್ಅಪ್ಗಳಿಗಾಗಿ ರೂ. 1,000 ಕೋಟಿ ನಿಧಿಯನ್ನು ಮೀಸಲಿರಿಸಿ ಕರ್ನಾಟಕ ಕ್ವಾಂಟಮ್ ಮಿಷನ್ (KQM) ಅನ್ನು ಪ್ರಾರಂಭಿಸುತ್ತಿದ್ದೇವೆ. 11. ಕ್ವಾಂಟಮ್ ತಂತ್ರಜ್ಞಾನದ ಕಾರ್ಯಪಡೆಯು ನೀತಿ ನಿರೂಪಣೆಗೆ ಮಾರ್ಗದರ್ಶನ ಮಾಡಿದರೆ, ಕ್ವಾಂಟಮ್ ಪಾರ್ಕ್ ಉತ್ಪಾದನಾ ವಲಯಗಳು ಹಾಗೂ ಕ್ಯೂ ಸಿಟಿ ನಾವಿನ್ಯತೆಯನ್ನು ಪೋಷಿಸುತ್ತವೆ. 12. ಮಾಹಿತಿ ತಂತ್ರಜ್ಞಾನ ಬೆಂಗಳೂರನ್ನು ಜಾಗತಿಕ ನಾಯಕನನ್ನಾಗಿಸಿದಂತೆಯೇ ಕ್ವಾಂಟಮ್ ಸಮಗ್ರ ಕೇಂದ್ರವಾದ ಕ್ಯೂ ಸಿಟಿ ಭಾರತವನ್ನು ಜಾಗತಿಕ ನಾಯಕನನ್ನಾಗಿಸಲಿದೆ. 13. ಭಾರತದ ಕ್ವಾಂಟಮ್ ಕ್ರಾಂತಿಯನ್ನು ಕರ್ನಾಟಕ ಮುನ್ನಡೆಸುವುದನ್ನು ಖಾತ್ರಿಪಡಿಸಲು ಐದು ಪ್ರಮುಖ ಸ್ತಂಭಗಳ ಮೇಲೆ ನಮ್ಮ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಮೊದಲನೆಯದಾಗಿ ಕೌಶಲ್ಯಾಭಿವೃದ್ಧಿ*: 20ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕ್ವಾಂಟಮ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸುತ್ತೇವೆ ಹಾಗೂ ಪ್ರತಿ ವರ್ಷ 150 ಪಿ ಹೆಚ್. ಡಿ ಫೆಲೋಶಿಪ್ ಗಳಿಗೆ ನೆರವು ನೀಡುತ್ತೇವೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶ್ರೇಷ್ಠತೆ*: 1000- ಕ್ಯೂಬಿಟ್ ಪ್ರೊಸೆಸರ್ಗಳನ್ನು ಒಳಗೊಂಡಂತೆ ಅತ್ಯಾಧುನಿಕ ಕ್ವಾಂಟಮ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆರೋಗ್ಯ ರಕ್ಷಣೆ, ರಕ್ಷಣಾ ಮತ್ತು ಸೈಬರ್ ಭದ್ರತೆಯಲ್ಲಿ ಪ್ರಾಯೋಗಿಕವಾದ ನೈಜ-ಪ್ರಪಂಚದ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಮೂರನೆಯದಾಗಿ ಮೂಲ ಸೌಕರ್ಯ ಅಭಿವೃದ್ಧಿ*: ಭಾರತದ ಪ್ರಥಮ ಕ್ವಾಂಟಮ್ ಹಾರ್ಡ್ವೇರ್ ಪಾರ್ಕ್, 4 ನಾವಿನ್ಯತಾ ವಲಯಗಳು ಹಾಗೂ ಕ್ವಾಂಟಮ್ ಘಟಕಗಳ ಸ್ಥಳಿಯ ಉತ್ಪಾದನೆಯನ್ನು ಉತ್ತೇಜಿಸಲು ಮೀಸಲಿಡಲಾದ ಫ್ಯಾಬ್ ಲೈನ್ ನ್ನು ಕರ್ನಾಟಕ ಸ್ಥಾಪಿಸಲಿದೆ. ಉದ್ಯಮಗಳಿಗೆ ಬೆಂಬಲ*: ನೂರಕ್ಕೂ ಹೆಚ್ಚು ಸ್ಟಾರ್ಟಪ್ ಗಳಿಗೆ ಪೋಷಣೆ, ನೂರಕ್ಕೂ ಹೆಚ್ಚು ಪೇಟೆಂಟ್ ಗಳನ್ನು ದಾಖಲಿಸಲು ನೆರವು ನೀಡುವುದು ಮತ್ತು ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಸಹಾಯ ಒದಗಿಸಲು ಕ್ವಾಂಟಮ್ ವೆಂಚರ್ ಕ್ಯಾಪಿಟಲ್ ಫಂಡ್ ಅನ್ನು ಪ್ರಾರಂಭಿಸುತ್ತೇವೆ. ಕಡೆಯದಾಗಿ *ಜಾಗತಿಕ ಪಾಲುದಾರಿಕೆಗಳು* ಇಂಡಿಯಾ ಕ್ವಾಂಟಮ್ ಸಮಾವೇಶ ಹಾಗೂ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆಗಳ ಸಹಯೋಗ ದಂತಹ ಕ್ರಮಗಳಿಂದಾಗಿ ನಾವು ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ಕೇಂದ್ರವನ್ನಾಗಿಸುತ್ತೇವೆ. 14. 2035 ರ ವೇಳೆಗೆ 10,000 ಉನ್ನತ ಕೌಶಲ್ಯವಿರುವ ಉದ್ಯೋಗ ಸೃಷ್ಟಿ ಮತ್ತು ಕರ್ನಾಟಕವನ್ನು ಏಷ್ಯಾದ ಕ್ವಾಂಟಮ್ ರಾಜಧಾನಿಯನ್ನಾಗಿ ಸ್ಥಾಪಿಸುವುದು ನಮ್ಮ ಗುರಿ. 15. ಸಾಮಾನ್ಯ ನಾಗರಿಕರಿಗೆ ಕ್ವಾಂಟಮ್ ಹೇಗೆ ಪ್ರಯೋಜನಕಾರಿ ಎಂದು ಕೆಲವರು ಕೇಳಬಹುದು. ಪ್ರಾರಂಭಿಕ ಹಂತದಲ್ಲಿ ರೋಗಗಳ ಪತ್ತೆಗೆ, ಸುರಕ್ಷಿತ ಸಂವಹನ ಹಾಗೂ ಸ್ಮಾರ್ಟ್ ಕೃಷಿಯನ್ನು ಇದು ಸಾಧ್ಯವಾಗಿಸುತ್ತದೆ. ರಾಷ್ಟ್ರೀಯ ಭದ್ರತೆ ಶಿಕ್ಷಣ ಮತ್ತು ಆಡಳಿತವನ್ನು ಬಲಪಡಿಸುತ್ತದೆ. 16. ಕ್ವಾಂಟಮ್ ಎನ್ನುವುದು ನಮಗೆ ಕೇವಲ ತಂತ್ರಜ್ಞಾನವಲ್ಲ. ಬದಲಿಗೆ ಒಳಗೊಳ್ಳುವ ಪ್ರಗತಿ, ಘನತೆ ಹಾಗೂ ಅಭಿವೃದ್ಧಿಯಾಗಿದೆ. 17. ಕ್ವಾಂಟಮ್ ಕಂಪ್ಯೂಟರ್, ಕ್ರಿಪ್ಟೋಗ್ರಫಿ ಹಾಗೂ ಸೆನ್ಸಿಂಗ್ ನಲ್ಲಿ ಜಾಗತಿಕವಾಗಿ ರಾಷ್ಟ್ರಗಳು ಸ್ಪರ್ಧೆಗೆ ಇಳಿದಿವೆ. ರಾಷ್ಟ್ರೀಯ ಕ್ವಾಂಟಮ್ ಮಿಷನ್ ಮೂಲಕ ಕರ್ನಾಟಕದ ನಾಯಕತ್ವದಲ್ಲಿ ಭಾರತವು ಮುಂದಡಿಯಿಡುತ್ತಿದೆ. 18. ಐ ಐಎಸ್ಸಿ ಸೇರಿದಂತೆ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳು ಹಾಗೂ ಅತ್ಯುತ್ತಮ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳೊಂದಿಗೆ ಕರ್ನಾಟಕವು ಭಾರತದ ಕ್ವಾಂಟಮ್ ಕ್ರಾಂತಿಯನ್ನು ಮುನ್ನಡೆಸಲು ಅನನ್ಯ ಸ್ಥಾನವನ್ನು ಪಡೆದಿದೆ. 19. ಇದು ಕೇವಲ ಯೋಜನೆ ಅಲ್ಲ. ಬದಲಿಗೆ ವಿಜ್ಞಾನಿಗಳು, ಉದ್ಯಮಿಗಳು ಮತ್ತು ಯುವಕರು ಅಭಿವೃದ್ಧಿಯಾಗಲು, ಏಳಿಗೆ ಹೊಂದಲು ಮತ್ತು ಕರ್ನಾಟದಿಂದ ಕ್ವಾಂಟಮ್ ನಾವೀನ್ಯತೆಗಳನ್ನು ರಫ್ತು ಮಾಡಲು ಇದೊಂದು ಆಹ್ವಾನವಾಗಿದೆ. 20. ಈ ಕಾರ್ಯಕ್ರಮವು ಹೊಸ ವಿಚಾರಗಳು, ಪಾಲುದಾರಿಕೆಗಳು ಮತ್ತು ಪ್ರಗತಿಗಳನ್ನು ಉತ್ತೇಜಿಸಲಿ ಹಾಗೂ ಭಾರತದ ಕ್ವಾಂಟಮ್ ಶ್ರೇಷ್ಠತೆಯ ವೇಗವನ್ನು ಇಮ್ಮಡಿಗೊಳಿಸಲಿ. 21. ಕರ್ನಾಟಕದ ಕ್ವಾಂಟಮ್ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಹಾಗೂ ನಮ್ಮ ಸಂಸ್ಥೆಗಳೊಂದಿಗೆ ಸಹಯೋಗ ಬೆಳೆಸಿಕೊಳ್ಳುವಂತೆ ಉದ್ಯಮಿಗಳಿಗೆ ನಾನು ಒತ್ತಾಯಿಸುತ್ತೇನೆ. 22. ಕ್ವಾಂಟಮ್ ನಮ್ಮ ಭವಿಷ್ಯವಾಗಿದೆ. ವಿಜ್ಞಾನಿಗಳೇ ಮತ್ತು ವಿದ್ಯಾರ್ಥಿಗಳೇ, ಕರ್ನಾಟಕ ನಿಮ್ಮ ಆಟದ ಮೈದಾನ. 23. ಒಟ್ಟಾಗಿ, ಭಾರತವನ್ನು ಜಾಗತಿಕ ಕ್ವಾಂಟಮ್ ಸೂಪರ್ ಪವರ್ ಆಗಿಸೋಣ. 24. ಭಾರತದ ನಾವೀನ್ಯತಾ ನಗರವಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಸ್ಫೂರ್ತಿದಾಯಕ ಹಾಗೂ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳು. ಜೈ ಹಿಂದ್, ಜೈ ಕರ್ನಾಟಕ.
ತುಮಕೂರು ಬ್ರೇಕಿಂಗ್…ಕ್ಷೇತ್ರದಲ್ಲಿ ತಲೆಯೆತ್ತಿಕೊಂಡು ಓಡಾಡಲಿಕ್ಕೆ ಆಗ್ತಾ ಇಲ್ಲಾ…
ತುಮಕೂರಿನಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ.. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರ ಜೊತೆ ಸಭೆ ಕರೆದ ವಿಚಾರ.. ಸಿದ್ದರಾಮಯ್ಯ ಕಾಂಗ್ರೆಸ್ ನ ಶಾಸಕರನ್ನ ಸಭೆ ಕರೆದಿದ್ದಾರೆ. ಕಾಂಗ್ರೆಸ್ ನವರೇ ಕರ್ನಾಟಕವನ್ನ ಆಳ್ತಾ ಇದ್ದಾರೆ ಅನ್ನೊ ಹಾಗೆ ಕರೆದಿದ್ದಾರೆ.. ಎಲ್ಲಾ ಶಾಸಕರನ್ನ ಸಭೆಗೆ ಕರೆಯಬೇಕಿತ್ತು.. ಏನ್ ಬರೀ ಕಾಂಗ್ರೇಸ್ ನವರನ್ನೆ ಕರೆದಿರೋದು..? ಕರ್ನಾಟಕ ಸಮಗ್ರ ಅಭಿವೃದ್ಧಿ ಅಗಬೇಕು ಅಂದ್ರೆ.. ಎಲ್ಲಾ ಶಾಸಕರನ್ನ ಕರೆದು ಅನುದಾನ ಕೊಡೊದರ ಬಗ್ಗೆ ಮಾತಾಡಬೇಕಿತ್ತು.. ಈ ತಾರತಮ್ಯ ಸಿದ್ದರಾಮಯ್ಯ ನಿಗೆ ಯಾಕೋ. ಸಿದ್ದರಾಮಯ್ಯ ಹೋಗೋ ಕಾಲದಲ್ಲಿ ಕೇಡು ಗಾಲಕ್ಕೆ ನಾಯಿ ಮೊಟ್ಟೆ ಇಡ್ತು ಅಂತ ಹೇಳ್ತಾರಲ್ಲ.. ಹಾಗಾಗಿ ಸಿದ್ದರಾಮಯ್ಯ ಇಳಿಯೋ ಕಾಲದಲ್ಲಿ ಇಂತಹ ಆರೊಪ ತಗೊಳ್ತಿದ್ದಾರೆ.. 50 ಕೋಟಿ ಅನುದಾನ ಕೊಡ್ತಿವಿ ಅಂತಾ ಹೇಳಿದ್ದಾರೆ… ಅದರಲ್ಲೂ ತಾರತಮ್ಯ ಮಾಡಿದ್ರೆ ಅಸೆಂಬ್ಲಿ ನಡೆಯೋಕೆ ಬಿಡಲ್ಲಾ ಅಂತಾ ಅಶೋಕ್ ಅವರಿಗೆ ಹೇಳಿದಿವಿ.. 50 ಕೋಟಿ ಅನುದಾನ ಎಲ್ಲರಿಗೂ ಸಮಾನವಾಗಿ ಹಂಚಬೇಕು.. ಬಜೆಟ್ ಬುಕ್ ನಲ್ಲು ಘೋಷಣೆ ಆಗಿದೆ… ಅದೇನಾದ್ರೂ ಕೊಟ್ಟಿಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಅಸೆಂಬ್ಲಿ ನಡೆಯೋಕ್ಕೆ ಬಿಡಲ್ಲ.. *ಡಿಸಿಎಂ ಡಿಕೆಶಿ ಶಾಸಕರನ್ನ ಸಭೆಗೆ ಕರೆದಿರುವ ವಿಚಾರ..* ಕಾಂಗ್ರೆಸ್ ಸತ್ತೋಗಿದೆ… ಹೇಳಿದ್ನಲ್ಲರಿ.. ಕರ್ನಾಟಕದ ಪಾಲಿಗೆ ಸತ್ತು ಮಲಗಿದೆ.. ಬರಿ ಪೇಪರ್ ಮೇಲಿದೆ,ಹಣನೂ ಇಲ್ಲಾ ಏನೂ ಇಲ್ಲಾ… ಸುಮ್ಮನೆ ಮೀಟಿಂಗ್ ಮಾಡಿ ತಿಪ್ಪೆ ಸಾರಿಸುತ್ತಿದ್ದಾರೆ.. ಡಿಕೆ ಶಿವಕುಮಾರ್ ನಾನು ಮುಖ್ಯಮಂತ್ರಿ ಆಗಬೇಕು ಅಂತಾ.. ಸಿದ್ದರಾಮಯ್ಯ ನಾನೇ ಉಳಕೋ ಬೇಕು ಅಂತಾ… ಅದರ ಮದ್ಯೆ ಮಲ್ಲಿಕಾರ್ಜುನ್ ಖರ್ಗೆ ನಾನ್ ಬರ್ತಿನಿ ಅಂತಾ ಮದ್ಯೆ ಬಂದು ಕುಳಿತಿದಾರೆ.. ಕಾಂಗ್ರೇಸ್ ಮೂರು ಬಾಗಿಲಲ್ಲ 10 ಬಾಗಿಲಾಗಿ ಕುಳಿತಿದೆ.. ಇವತ್ತು ಎಲೆಕ್ಷನ್ ಗೆ ಹೋದ್ರೆ 150 ಸೀಟು ಬೀಜೆಪಿ ಬರುತ್ತೆ.. ಕಾಂಗ್ರೇಸ್ ನವರು ಭ್ರಮೆಯಲ್ಲಿದ್ದಾರೆ…ಕನ್ನಡಿಯಲ್ಲಿ ಅವರ ಮುಸಡಿ ನೋಡಿಕೊಳ್ಳೊಕೆ ಹೇಳಿ.. ಅವರ ಯೋಗ್ಯತೆ ಗೊತ್ತಾಗಲಿದೆ.. ಎನ್ ಸಾಧನೆ ಮಾಡಿದ್ದಾರೆ ಅಂತಾ ಸಾದನ ಸಮಾವೇಶ ಮಾಡ್ತಾರೆ… 5 ರೂ ಹಣ ಕೊಟ್ಟಿಲ್ಲ, ಒಂದು ರೂಪಾಯಿ ಕೆಲಸ ಆಗಿಲ್ಲಾ.. ಕ್ಷೇತ್ರದಲ್ಲಿ ಮುಖ ಎತ್ತಿಕೊಂಡು ತಿರುಗೋಕೆ ಆಗ್ತಾ ಇಲ್ಲಾ.. ಇಂತಹ ದರಿದ್ರ ಸರ್ಕಾರನಾ ನನ್ನ ಜೀವನದಲ್ಲೂ ನೋಡಿರಲಿಲ್ಲ..
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಐಟಿ ಕಂಪೆನಿಗಳಿಗೆ ಮುಕ್ತ ಸ್ವಾಗತ: ಡಿಸಿಎಂ ಡಿ.ಕೆ.ಶಿವಕುಮಾರ್
https://ahindanews.com/wp-content/uploads/2025/08/WhatsApp-Video-2025-08-04-at-11.55.45-AM.mp4 ಬಿಜೆಪಿ ಮತಗಳ್ಳತನ ಜನರ ಗಮನಕ್ಕೆ ತರಬೇಕು ಹನಿಟ್ರ್ಯಾಪ್ ತನಿಖೆ ನನಗೆ ಏನೂ ಗೊತ್ತಿಲ್ಲ ಬೆಂಗಳೂರು, ಜು.31: “ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಲಸೆ ಬರುವ ಐಟಿ ಕಂಪನಿಗಳನ್ನು ನಾವು ಸ್ವಾಗತಿಸುತ್ತೇವೆ. ನಾವು ಈ ಕಂಪನಿಗಳಿಗೆ ತಂತ್ರಜ್ಞಾನ, ವಿದ್ಯುತ್ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲು ತಯಾರಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನಗರದ ಮಾನ್ಯತಾ ಟೆಕ್ ಪಾರ್ಕಿನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದ ಕ್ವಾಂಟಮ್ ಶೃಂಗಸಭೆಯ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಉತ್ತರಿಸಿದರು. “ನಾಲ್ಕು ದಿನಗಳ ಹಿಂದೆ ಮಹರಾಷ್ಟ್ರದ ಉಪಮುಖ್ಯಮಂತ್ರಿಯವರು ಪುಣೆಯಿಂದ ಬೆಂಗಳೂರಿಗೆ ಐಟಿ ಕಂಪೆನಿಗಳು ಹೋಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ನಾವು ದೇಶದ ಇತರೆ ರಾಜ್ಯಗಳ ಜೊತೆ ಸ್ಪರ್ಧಿಸುತ್ತಿಲ್ಲ ಬದಲಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆ” ಎಂದರು. “ಮಹಾರಾಷ್ಟ್ರವೂ ಸಹ ಐಟಿ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವ ರಾಜ್ಯ. ಅಲ್ಲಿನ ಐಟಿ ಹಬ್ ಪುಣೆಯ ಹಿಂಜವಾಡಿಯು ಅತ್ಯಂತ ಪ್ರಮುಖ ಐಟಿ ಪ್ರದೇಶ. ಆದರೆ ನಮ್ಮ ರಾಜ್ಯಕ್ಕೆ ಬರುವ ಕಂಪನಿಗಳನ್ನು ನಾವು ಮುಕ್ತವಾಗಿ ಸ್ವಾಗತಿಸಿ ಬೆಂಬಲಿಸುತ್ತೇವೆ” ಎಂದರು. ಬಿಜೆಪಿ ಮತಗಳ್ಳತನ ಜನರ ಗಮನಕ್ಕೆ ತರಬೇಕು ಮತಗಳ್ಳತನದ ವಿರುದ್ದ ಪ್ರತಿಭಟನೆ ನಗರದ ಒಳಗೆ ಹಮ್ಮಿಕೊಂಡಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ನಮ್ಮ ರಾಜಕೀಯ ನಿಲುವಿನ ಬಗ್ಗೆ ಬೇರೆಯವರಿಗೆ ಏಕೆ ಇರುಸು ಮುರುಸಾಗುತ್ತಿದೆ. ನಾವು ಏಕೆ ಬೇರೆಯವರಿಗೆ ಇದರ ಬಗ್ಗೆ ಉತ್ತರಿಸಬೇಕು. ನಾವು ಕರ್ನಾಟಕದ ಜನರಿಗೆ ಉತ್ತರದಾಯಿಗಳು. ಬಿಜೆಪಿಯವರು ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಬಳಸಿಕೊಂಡು ಅಕ್ರಮ ಎಸಗಿದರು. ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ತನಿಖೆ ನಡೆಸಿಯೇ ನಮ್ಮ ನಾಯಕರು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ರಾಜಕೀಯ ಉದ್ದೇಶಕ್ಕೆ ರಾಜ್ಯಕ್ಕೆ ಬರುತ್ತಿಲ್ಲ. ಬದಲಾಗಿ ಜನರನ್ನು ಎಚ್ಚರಗೊಳಿಸಲು ಬರುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ಉಳಿಯಬೇಕು. ಚುನಾವಣಾ ಆಯೋಗ ರಾಜಕೀಯ ಪಕ್ಷದ ಭಾಗವಾಗುವುದನ್ನು ತಪ್ಪಿಸಬೇಕು” ಎಂದರು. ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ಬಿಜೆಪಿ ಮತಗಳ್ಳತನ ನಡೆಸಿದೆ ಎಂಬುದನ್ನು ಜನರ ಗಮನಕ್ಕೆ ತರಬೇಕು ಎಂಬುದು ನಮ್ಮ ಉದ್ದೇಶ. ಬಿಜೆಪಿ ಮತಗಳ್ಳತನದ ಬಗ್ಗೆ ಪ್ರತಿಭಟನಾ ಸಭೆ ಅಥವಾ ರ್ಯಾಲಿ ಮಾಡಬೇಕೆ ಎನ್ನುವುದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು” ಎಂದು ಹೇಳಿದರು. “ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯವರು ಚುನಾವಣಾ ಅಕ್ರಮ ಎಗಸಿರುವುದನ್ನು ಬೆಳಕಿಗೆ ತರಬೇಕು. ಈ ಬಗ್ಗೆ ಪಕ್ಷದಿಂದಲೂ ಸಂಶೋಧನೆ ನಡೆದಿದೆ. ಆದರೆ ಜನ ಸೇರುವುದರ ಕುರಿತು ನ್ಯಾಯಲಯದ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಗಳು ಇರುವ ಕಾರಣಕ್ಕೆ ಪ್ರತಿಭಟನೆಯ ಸ್ವರೂಪವನ್ನು ಚರ್ಚೆ ಮಾಡಲಾಗುವುದು” ಎಂದರು. ಹನಿಟ್ರ್ಯಾಪ್ ತನಿಖೆ ನನಗೆ ಏನೂ ಗೊತ್ತಿಲ್ಲ ರಾಜಣ್ಣ ಅವರ ಹನಿಟ್ಯ್ರಾಪ್ ವಿಚಾರದಲ್ಲಿ ಸಾಕ್ಷ್ಯಗಳಿಲ್ಲ ಎನ್ನುವ ಸಿಐಡಿ ವರದಿಯ ಬಗ್ಗೆ ಕೇಳಿದಾಗ, “ನನಗೂ ಇದಕ್ಕೂ ಏನು ಸಂಬಂಧ. ಯಾರು ದೂರು ನೀಡಿದ್ದು ಗೊತ್ತಿಲ್ಲ, ತನಿಖೆ ನಡೆದಿದ್ದು ಗೊತ್ತಿಲ್ಲ. ಇದನ್ನು ನಿಮ್ಮ (ಮಾಧ್ಯಮಗಳ) ಬಾಯಲ್ಲೇ ಕೇಳುತ್ತಿದ್ದೇನೆ. ನನಗೆ ಏನೂ ಗೊತ್ತಿಲ್ಲ” ಎಂದರು. ಕೆಎಂಎಫ್ ಅಧ್ಯಕ್ಷಗಾದಿಯ ಬಗ್ಗೆ ಕೇಳಿದಾಗ, “ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಧ್ಯಕ್ಷಗಾದಿ ವಿಚಾರ ಮಾಧ್ಯಮಗಳ ಸೃಷ್ಟಿ. ಇದರ ಬಗ್ಗೆ ಸಂಘದ ಪದಾಧಿಕಾರಿಗಳು ನೋಡಿಕೊಳ್ಳುತ್ತಾರೆ” ಎಂದರು. ಆಭರಣ ಮಳಿಗೆ ಉದ್ಘಾಟನೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಈ ಕುಟುಂಬ ಅನೇಕ ವರ್ಷಗಳಿಂದ ನನಗೆ ಆತ್ಮೀಯರು. ಇಪ್ಪತ್ತನೇ ಮಳಿಗೆಯನ್ನು ಉದ್ಘಾಟನೆ ಮಾಡಿದ್ದೇನೆ. ಇದು 200 ಮಳಿಗೆಗಳಾಗಿ ಬೆಳೆಯಲಿ ಎಂದು ಆಶೀಸುತ್ತೇನೆ. ಈ ಕುಟುಂಬದವರು ನನ್ನನ್ನು ಚಿಕ್ಕವಯಸ್ಸಿನಿಂದಲೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಮೂಲತಃ ಉಡುಪಿಯವರಾದ ಇವರ ಮಳಿಗೆಗಳು ಬೆಂಗಳೂರಿನಲ್ಲಿ ಹೆಚ್ಚಿವೆ. ಸ್ಥಳೀಯರಾದ ಇವರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ” ಎಂದರು.
ಮಂಡ್ಯದವರು ಒಳ್ಳೆ ಮನಸ್ಸಿನ ಉಪಕಾರ ಸ್ಮರಣೆಯ ಜನ: ಸಿ.ಎಂ ಮೆಚ್ಚುಗೆ
ಶಸಕ ಉದಯ್ ಕಾರಣದಿಂದ ಮದ್ದೂರಿನಲ್ಲಿ ಅಭಿವೃದ್ಧಿಯ ಮಹಾಪೂರ: ಸಿ.ಎಂ ಸಿದ್ದರಾಮಯ್ಯ ಮಂಡ್ಯ ನಗರದಲ್ಲಿ 100 ಅಡಿ ರಸ್ತೆಗೆ ಸರ್ಕಾರ ಒಪ್ಪಿಗೆ: ಸಿ.ಎಂ ಘೋಷಣೆ ಶಾಸಕ ಉದಯ್ ಅವರದ್ದು ಕಡಿಮೆ ಮಾತು, ಹೆಚ್ಚು ಕೆಲಸ: ಸಿ.ಎಂ ಒಂದೇ ದಿನ 1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ರಿಂದ ಚಾಲನೆ ಮದ್ದೂರು ಜು 28: ಒಂದೇ ದಿನ 1146 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಎರಚುವ ಪ್ರತಿಪಕ್ಷಗಳಿಗೆ ಇದು ನಮ್ಮ ಸರ್ಕಾರದ ಸವಾಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 1146 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಕಾವೇರಿ ಅಭಿವೃದ್ಧಿ ನಿಗಮ ಒಂದರಲ್ಲೇ ಎರಡು ವರ್ಷದಲ್ಲಿ 560 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನಾಲ್ಕು ವರ್ಷ ಅಧಿಕಾರದಲ್ಲಿದ್ದ ಪ್ರತಿಪಕ್ಷ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ ಎಂದು ಸವಾಲೆಸೆದರು. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಮಂಡ್ಯ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಚುಕ್ತಾ ಮಾಡಿದ್ದು ನಾವು, ಕಾರ್ಖಾನೆಯ ಪುನಶ್ಚೇತನಕ್ಕೆ 52 ಕೋಟಿ ರೂಪಾಯಿ ಕೊಟ್ಟಿದ್ದು ನಾವು. ಹಾಲು ಉತ್ಪಾದಕರ ಸಂಘದ ಮನವಿಗೆ ಸ್ಪಂದಿಸಿ ಹಾಲು ಉತ್ಪಾದಕರಿಗೆ ಲೀಟರ್ ಗೆ 5 ರೂ ಸಹಾಯಧನ ಒದಗಿಸಿದ್ದು ನಾವು. ಈಗ ಮತ್ತೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 10 ಕೋಟಿ ರೂ ಕೊಟ್ಟಿರುವುದು ನಮ್ಮ ಸರ್ಕಾರ. ಮಂಡ್ಯ ಕೃಷಿ ವಿವಿ ಆರಂಭಿಸಿ, ಅಗತ್ಯ ಅನುದಾನ ಕೊಟ್ಟಿರುವುದು ನಾವು. ಇದು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರದ ಬದ್ಧತೆ ಎಂದು ವಿವರಿಸಿದರು. ನಾವು ಜಾರಿ ಮಾಡಿದ ಐದು ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ಕೊಳ್ಳುವ ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಶಕ್ತಿ ಬಂದಿದೆ. ಪರಿಣಾಮ ಇಡೀ ದೇಶದಲ್ಲಿ ರಾಜ್ಯದ ತಲಾ ಆದಾಯ ನಂಬರ್ ಒನ್ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಮಂಡ್ಯ ನಗರದಲ್ಲಿ 100 ಅಡಿ ರಸ್ತೆ ಮಾಡಲು ಶಾಸಕ ಉದಯ್ ಅವರ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಘೋಷಿಸಿದ ಮುಖ್ಯಮಂತ್ರಿಗಳು, ಶಾಸಕ ಉದಯ್ ಅವರದ್ದು ಕಡಿಮೆ ಮಾತು, ಹೆಚ್ಚು ಕೆಲಸ ಮಾಡುತ್ತಾರೆ ಎಂದು ಪ್ರಶಂಶಿಸಿದರು. ರಾಜ್ಯದ ಪಾಲಿನ ಗೊಬ್ಬರವನ್ನೂ ಕೇಂದ್ರ ಕೊಡುತ್ತಿಲ್ಲ ರಾಜ್ಯಕ್ಕೆ ಕೊಡಬೇಕಾದಷ್ಟು ಗೊಬ್ಬರ ಕೊಡದೆ ಕೇಂದ್ರ ಸರ್ಕಾರ ರಾಜ್ಯದ ರೈತರ ವಿರೋಧಿಯಾಗಿದೆ. ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಅಗತ್ಯ ಗೊಬ್ಬರ ಸರಬರಾಜು ಮಾಡುವಂತೆ ಒತ್ತಾಯಿಸಿ ಒಂದು ವಾರ ಕಳೆದರೂ ಇದುವರೆಗೂ ಕೊಟ್ಟಿಲ್ಲ. ಬಿಜೆಪಿ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಕೇಂದ್ರದ ಜೊತೆ ಮಾತನಾಡಿ ಗೊಬ್ಬರ ಕೊಡಿಸಲಿ ಎಂದು ಸವಾಲು ಹಾಕಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ರಹೀಂ ಖಾನ್, ಶಾಸಕರುಗಳಾದ ರವಿ ಗಣಿಗ, ದಿನೇಶ್ ಗೂಳೀಗೌಡ ಸೇರಿ ಹಲವು ಪ್ರಮುಖರು ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಉದಯ್ ಅವರು ಅಧ್ಯಕ್ಷತೆ ವಹಿಸಿದ್ದರು.
ಇನ್ ಲೈನ್ ಹಾಕಿಯಲ್ಲಿ ಪದಕ ಗೆದ್ದು ಬಂದ ಕನ್ನಡಿಗರು.
https://ahindanews.com/wp-content/uploads/2025/08/WhatsApp-Video-2025-08-04-at-2.57.55-PM.mp4 ದೇವನಹಳ್ಳಿ ಇನ್ ಲೈನ್ ಹಾಕಿಯಲ್ಲಿ ಪದಕ ಗೆದ್ದು ಬಂದ ಕನ್ನಡಿಗರು. ವಿದೇಶದಲ್ಲಿ ಪದಕಗೆದ್ದು ತಾಯ್ನಾಡಿಗೆ ವಾಪಸ್ ಆದ ಕನ್ನಡಿಗರು. ತವರಿಗೆ ಬಂದ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ. ಪೋಷಕರು ಮತ್ತು ಅಭಿಮಾನಿಗಳಿಂದ ಅದ್ದೂರಿ ಸ್ವಾಗತ. ರೋಲಿಂಗ್ ಸ್ಕೇಟಿಂಗ್ ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಬಂದ ಕನ್ನಡಿಗರು. ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಪದಕ ಗೆದ್ದು ಬಂದ ಆರು ಜನ. 20 ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಷಿಪ್. ದಕ್ಷೀಣಾ ಕೋರಿಯಾದಲ್ಲಿ ನಡೆದ ಏಷ್ಯನ್ ರೋಲರ್ ಸ್ಕೆಟಿಂಗ್ ಹಾಕಿಯಲ್ಲಿ ಗೆದ್ದ ಭಾರತ. ಭಾರತ ತಂಡದೊಂದಿಗೆ ಪ್ರತಿನಿಧಿಸಿದ್ದ 6 ಕನ್ನಡಿಗರು ಕೆಂಪೇಗೌಡ ಏರ್ಪೊಟ್ ಗೆ ಆಗಮನ. ಬೆಂಗಳೂರು ಮೂಲದ ಜೂನಿಯರ್ ಹುಡುಗರ ವಿಭಾಗದ ಓಂಸ್ವರೂಪ್ ಗೌಡನಿಗೆ ಕಂಚಿನ ಪದಕ. ಜೂನಿಯರ್ ಹುಡಗಿಯರ ಭಾರತ ತಂಡದಲ್ಲಿ ಚಾರ್ವಿ ಪ್ರಕಾಶ್ ಗೆ ಬೆಳ್ಳಿಪದಕ. ಆಟಗಾರರ ಕುಟುಂಬಸ್ಥರಿಂದ ಏರ್ಪೊಟ್ ನಲ್ಲಿ ಸಿಹಿಹಂಚಿ ಸಂಭ್ರಮ. ಆಟಗಾರರ ಜೊತೆ ಕುಟುಂಬಸ್ಥರು ಡೋಲು ಹೊಡೆತಕ್ಕೆ ಭರ್ಜರಿ ಕುಣಿತ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
2025ರ 30ನೇ ಜುಲೈ ಬೆಳಿಗೆ. 8.30ರ ಅನ್ವಯ ರಾಜ್ಯದಲ್ಲಿ ದಾಖಲಾದ ಮಳೆ ಪ್ರಮಾಣದ ವಿವರಗಳು
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ರಾಜ್ಯದಾದಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಲಾಗಿರುವ ದೂರಸ್ಥ ಮಳೆ ಮಾಪನ ಕೇಂದ್ರಗಳಲ್ಲಿ ದಿನಾಂಕ 29-07-2025ರ ಬೆಳಗ್ಗೆ 8.30ರ ಅನ್ವಯ ದಾಖಲಾದ ಮಳೆ ಪ್ರಮಾಣದ ಅನ್ವಯ ಕೆಳಕಂಡಂತೆ, ಜಿಲ್ಲಾವಾರು ಮಳೆ ಹಂಚಿಕೆಯು ಕಂಡುಬಂದಿರುತ್ತದೆ. ವ್ಯಾಪಕ ಮಳೆ: ರಾಜ್ಯದ 04 ಜಿಲ್ಲೆಗಳು (ಕೊಡಗು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ),ಸಾಧಾರಣ ವ್ಯಾಪಕ ಮಳೆ: ರಾಜ್ಯದ 02 ಜಿಲ್ಲೆಗಳು (ಚಿಕ್ಕಮಗಳೂರು ಮತ್ತು ಶಿವಮೊಗ್ಗ). ಅಲ್ಲಲ್ಲಿ ಚದುರಿದಂತೆ: ರಾಜ್ಯದ 04 ಜಿಲ್ಲೆಗಳು (ಹಾಸನ, ಬೆಳಗಾವಿ, ಧಾರವಾಡ ಮತ್ತು ಮೈಸೂರು).ಕೆಲವೆಡೆ: ರಾಜ್ಯದ 11 ಜಿಲ್ಲೆಗಳು (ಗದಗ, ಬೀದರ್, ಹಾವೇರಿ, ವಿಜಯಪುರ, ಚಾಮರಾಜನಗರ, ತುಮಕೂರು, ಕಲ್ಕುರಗಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ). ಅತ್ಯಲ್ಪಮಳೆ/ಒಣಹವೆ: ರಾಜ್ಯದ 10 ಜಿಲ್ಲೆಗಳು (ಬೆಂಗಳೂರು ನಗರ, ರಾಮನಗರ, ವಿಜಯನಗರ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೋಲಾರ ಮತ್ತು ಕೊಪ್ಪಳ). ಗರಿಷ್ಟ ಮಳೆ: 76. ಮಿ.ಮೀ. (ಮದ, ಗ್ರಾಮಪಂಚಾಯತಿ, ಮಡಿಕೇರಿ, ತಾಲೂಕು, ಕೊಡಗು, ಜಿಲ್ಲೆ)ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪಕ್ಕದ ಭಾಗಗಳಲ್ಲಿ ಸಾಮಾನ್ಯ ಮುಂಗಾರು ಪರಿಸ್ಥಿತಿ ಕಂಡು ಬಂದಿರುತ್ತದೆ. ಉತ್ತರಒಳನಾಡು ಮತ್ತು ದಕ್ಷಿಣಒಳನಾಡು ಜಿಲ್ಲೆಗಳಲ ದುರ್ಬಲ ಮುಂಗಾರು ರಾಜ್ಯದಾದಂತ ಕಂಡು ಬಂದಿರುತ್ತದೆ. ಒಟ್ಟರೆ ರಾಜ್ಯದಲ್ಲಿ ಅಲ್ಲಲ್ಲಿ ಚದುರಿದಂತೆ ಮಾತ್ರ ಮಳೆ ಕಂಡು ಬಂದಿರುತ್ತದೆ
ಚಿಕ್ಕಮಗಳೂರು ಆನೆ ದಾಳಿ ಸಾವು
ಆನೆ ದೊಡ್ಡಿ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ. ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ, ಮೂಡಿಗೆರೆ ಸಹಿತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ 5 ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ಬನ್ನೂರಿನ ಅನಿತಾ, ಶೃಂಗೇರಿಯ ಸುಬ್ಬೇಗೌಡ ಸೇರಿದಂತೆ, ದಿನನಿತ್ಯ ಮಾನವ ಪ್ರಾಣಿ ಸಂಘರ್ಷದಿಂದ ಜನ ಜೀವನಕ್ಕೆ ಬೆದರಿಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಲೋಕಸಭಾ ಕ್ಷೇತ್ರವಾದ ಚಿಕ್ಕಮಗಳೂರಿನಲ್ಲಿ ಕಾಡುಪ್ರಾಣಿಗಳ ಅದರಲ್ಲೂ ಆನೆದಾಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಆನೆಗಳ ಸಂತತಿ ವೇಗವಾಗಿ ಬೆಳೆಯುತ್ತಿದ್ದು, ಕಾಡಾನೆಗಳು ರೈತಾಪಿ ವರ್ಗದ ಬೆಳೆ ಮಾತ್ರವಲ್ಲ, ಕೃಷಿ ಕಾರ್ಯದಲ್ಲಿ ನಿರತರಾದ ರೈತರ ಹತ್ಯೆ ಮಾಡುತ್ತಿವೆ.ಇಂತಹ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರಕಾರಗಳು ಒಟ್ಟಾಗಿ ಆನೆಗಳ ನಿಯಂತ್ರಣ ಮತ್ತು ಆನೆ ದೊಡ್ಡಿಗಳ ನಿರ್ಮಾಣದ ಶಾಶ್ವತ ಪರಿಹಾರದ ಯೋಜನೆ ರೂಪಿಸಬೇಕೆಂದು ಮನವಿಯಲ್ಲಿ ಸಂಸದರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ ನೀಡಿ ಸೂಕ್ತ ವರದಿ ಪಡೆದು ಜಂಟಿ ಕಾರ್ಯಯೋಜನೆ ತಯಾರಿಸಿ, ಕಾಡಾನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಬೇಕೆಂದು ಮನವಿ ಮಾಡಿದ್ದಾರೆ.
ರೈತರೊಂದಿಗೆ ಚೆಲ್ಲಾಟ ಆಡ್ತಾ ಇದೇಯಾ ಕೃಷಿ ಇಲಾಖೆ..?
https://ahindanews.com/wp-content/uploads/2025/08/WhatsApp-Video-2025-08-04-at-2.46.36-PM.mp4 ಬಾಗಲಕೋಟ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ. ರಸಗೊಬ್ಬರದ ಕೃತಕ ಅಭಾವ ಸೃಷ್ಟಿ . ರಸಗೊಬ್ಬರ ಪಡೆಯಲು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತ ರೈತರು.. ಬೆಳಗ್ಗೆಯಿಂದ ಕಾದು ಕಾದು ಸಿಗ್ತೀಲ್ಲ ರಸಗೊಬ್ಬರ. ರಸಗೊಬ್ಬರ ಸಿಗದೇ ಪರದಾಟ ನಡೆಸುತ್ತಿರೋ ರೈತರು. ಬಾಗಲಕೋಟೆ ಜಿಲ್ಲೆಯಾದ್ಯಂತ ಯೂರಿಯಾ ರಸಗೊಬ್ಬರದ ಕೊರತೆ. ಉತ್ತಮ ಮಳೆಯಾಗುತ್ತಿದ್ದು, ಉತ್ತಮ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರಿಗೆ ಶಾಕ್. ಸಹಕಾರಿ ಸಂಘಗಳಲ್ಲಿ 260 ರೂ.ಗೆ ಸಿಗ್ತಾ ಇರೋ ಯೂರಿಯಾ ಗೊಬ್ಬರ. ಖಾಸಗಿ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ 410 ರೂಗೆ ಮಾರಾಟವಾಗ್ತಾ ಇರೋ ಯೂರಿಯಾ. ಸರತಿ ಸಾಲಿನಲ್ಲಿ ನಿಂತ ರೈತರು ರಸ ಗೊಬ್ಬರ ಪಡೆಯಲು ಹರಸಾಹಸ. ಸ್ಟಾಕ್ ಇದ್ರೂ ಇದೀಗ ಯೂರಿಯಾ ಇಲ್ಲ ಎನ್ನುತ್ತಿರೋ ಖಾಸಗಿ ಅಂಗಡಿಗಳು. ಅತಿಹೆಚ್ಚು ಬೆಲೆಗೆ ಮಾರಾಟ ಮಾಡಲು ಖಾಸಗಿ ಅಂಗಡಿ ಮಾಲೀಕರು ಪ್ಲ್ಯಾನ್. ಎಲ್ಲಾದರೂ ಯೂರಿಯಾ ಗೊಬ್ಬರ ಸಿಕ್ರೆ ಸಾಕು ಅನ್ನುತ್ತಿರು ರೈತರು. ಬದಾಮಿ ತಾಲೂಕಿನ ಕೆರೂರು ಪಟ್ಟಣ ಸೂತ್ತ ಮುತ್ತಲಿನ ಗ್ರಾಮದ ಏಕಕಾಲಕ್ಕೆ ಗೊಬ್ಬರ ಕರಗಿಸಲು ಮಗುವಿದ್ದ ರೈತರು.. ಇತ್ತ ಬಾಗಲಕೋಟೆ ಜಿಲ್ಲೆಯಲ್ಲಿ ಯೂರಿಯಾ ಸಪ್ಲೈ ಇದೆ, ಸ್ಟಾಕ್ ಇದೆ ಎಂದು ರಸಗೊಬ್ಬರ ಕಳುಹಿಸದ ಅಧಿಕಾರಿಗಳು ರಸಗೊಬ್ಬರದ ಕೃತಕ ಅಭಾವದಿಂದ ರಸಗೊಬ್ಬರ ಕಳುಹಿಸದ ಅಧಿಕಾರಿಗಳು.. ಅಧಿಕಾರಿಗಳ ಹಾಗೂ ಖಾಸಗಿ ಅಂಗಡಿಗಳ ಆಟಕ್ಕೆ ಬಲಿಯಾಗ್ತಿರೋ ರೈತರು.. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣ..
ಶಿರೋನಾಮೆ:ಟ್ರಂಪ್ ಸುದ್ದಿಗಳಿಗೆ 25% ಡಿಜಿಟಲ್ ಟ್ರಾಫಿಕ್ ಏರಿಕೆ!
ಉಪಶಿರೋನಾಮೆ:ಪುನಃ ರಾಜಕೀಯ ಚಟುವಟಿಕೆಗಳು ಹಾಗೂ ಸುದ್ದಿಗಳ ಮಧ್ಯೆ ಡೊನಾಲ್ಡ್ ಟ್ರಂಪ್ ಕುರಿತ ಆನ್ಲೈನ್ ಆಸಕ್ತಿ ಏರಿಕೆಯಾದ ಬಗ್ಗೆ ವರದಿ ವಿವರ:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಸುದ್ದಿಗಳ ಕೇಂದ್ರಬಿಂದುವಾಗಿರುವುದರಿಂದ, ಅಂತರ್ಜಾಲದಲ್ಲಿ ಟ್ರಂಪ್ ಸಂಬಂಧಿತ ವಿಷಯಗಳಿಗೆ 25% ಡಿಜಿಟಲ್ ಟ್ರಾಫಿಕ್ ಏರಿಕೆಯಾಗಿದೆ ಎಂದು ವರದಿಗಳು ತಿಳಿಸುತ್ತವೆ. ವಿಶೇಷವಾಗಿ ಚುನಾವಣೆ ಪೂರ್ವ ಸಿದ್ಧತೆಗಳು, ವಿವಾದಾತ್ಮಕ ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಅವರ ಸಕ್ರಿಯತೆಯಿಂದ ಈ ಏರಿಕೆ ಕಂಡುಬಂದಿದೆ. ವಿವಿಧ ಡಿಜಿಟಲ್ ವಿಶ್ಲೇಷಣಾ ಉಪಕರಣಗಳ ಪ್ರಕಾರ, ಟ್ರಂಪ್ ಅವರ ರಾಜಕೀಯ ಯಾತ್ರೆಗಳು, ನ್ಯಾಯಾಲಯದ ಪ್ರಕರಣಗಳು, ಹಾಗೂ ಅಭಿಯಾನ ಘೋಷಣೆಗಳ ಬಗ್ಗೆ ಜನರ ಹುಡುಕಾಟ ಮತ್ತು ಓದು ಹೆಚ್ಚಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಮಾಧ್ಯಮಗಳು ಟ್ರಂಪ್ ಕುರಿತ ಸುದ್ದಿಗಳಿಗೆ ಹೆಚ್ಚು ಓದುಗರನ್ನು ಆಕರ್ಷಿಸುತ್ತಿವೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಡಿಜಿಟಲ್ ಟ್ರಾಫಿಕ್ ಏರಿಕೆಗೆ ಟ್ರಂಪ್ ಅವರ ಉದ್ದೇಶಿತ ಮಾಧ್ಯಮ ತಂತ್ರಗಳು ಹಾಗೂ ವೈರಲ್ ವಿಡಿಯೋಗಳು ಕಾರಣವಾಗಿವೆ. ಕರೆಗೂಪ್ಯಾತಿ:ಇಂತಹ ಇನ್ನಷ್ಟು ರಾಜಕೀಯ ಸುದ್ದಿ, ವಿಶ್ಲೇಷಣೆ ಮತ್ತು ಅಪ್ಡೇಟ್ಗಳಿಗಾಗಿ, ನಮ್ಮ ನ್ಯೂಸ್ ಚಾನೆಲ್ನೊಂದಿಗೆ ಸಂಪರ್ಕದಲ್ಲಿರಿ.