ವಿಶಾಖಪಟ್ಟಣ, ಆಂಧ್ರಪ್ರದೇಶ – ಜುಲೈ 30, 2025: ಜಾಗತಿಕ ತಂತ್ರಜ್ಞಾನ ಕಂಪನಿ ಗೂಗಲ್ ಭಾರತದ ಡಿಜಿಟಲ್ ಯುಗದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ. ವಿಶಾಖಪಟ್ಟಣದಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿರುವ, 1 ಗಿಗಾವಾಟ್ ಸಾಮರ್ಥ್ಯದ ಹೈಪರ್ಸ್ಕೇಲ್ ಡೇಟಾ ಸೆಂಟರ್ ನಿರ್ಮಿಸಲು ಗೂಗಲ್ ಸುಮಾರು $6 ಬಿಲಿಯನ್ ಹೂಡಿಕೆ ಮಾಡಲಿದೆ. ಇದು ಆಕಾಶ್ಭಾರತದಲ್ಲಿಯೇ ಅತಿದೊಡ್ಡ ಡೇಟಾ ಸೆಂಟರ್ ಆಗಿರಲಿದೆ. ಪೂರ್ತಿ ಹಸಿರು ಶಕ್ತಿಯಿಂದ ಚಾಲನೆಗೊಳ್ಳುವ ಡೇಟಾ ಸೆಂಟರ್ಗೂಗಲ್ ಈ ಯೋಜನೆಯ ಭಾಗವಾಗಿ $2 ಬಿಲಿಯನ್ ಹಸಿರು ಶಕ್ತಿಯ ಮೂಲಸೌಕರ್ಯಗಳ ನಿರ್ಮಾಣಕ್ಕೆ ಮೀಸಲಿಡಲಿದೆ – ಇದರಲ್ಲಿ ಸೌರಶಕ್ತಿ, ಪವನ್ ವಿದ್ಯುತ್ ಪ್ರಮುಖವಾಗಿವೆ. ಗೂಗಲ್ ತನ್ನ ಜಾಗತಿಕ ಗುರಿಯಾದ 2030ರೊಳಗೆ 24×7 ಕಾರ್ಬನ್ ಮುಕ್ತ ಎನರ್ಜಿ ಬಳಕೆ ಗುರಿಯನ್ನು ಈ ಮೂಲಕ ಭಾರತದಲ್ಲಿ ಸಾಧಿಸಲು ಉದ್ದೇಶಿಸಿದೆ. ಆಂಧ್ರಪ್ರದೇಶವನ್ನು ಡೇಟಾ ಹಬ್ ಆಗಿ ರೂಪಿಸಲು ಸಿದ್ಧತೆರಾಜ್ಯ ಸರ್ಕಾರ ವಿಶಾಖಪಟ್ಟಣದಲ್ಲಿ ಮೂರು ಕೇಬಲ್ ಲ್ಯಾಂಡಿಂಗ್ ಸ್ಟೇಷನ್ಗಳು ನಿರ್ಮಿಸಲು ಯೋಜಿಸಿದೆ, ಇದರಿಂದ ಅಂತಾರಾಷ್ಟ್ರೀಯ ಸಂಪರ್ಕವು ಹೆಚ್ಚಳವಾಗಲಿದೆ ಮತ್ತು ಕ್ಲೌಡ್ ಸೇವೆಗಳ ತ್ವರಿತ ಪ್ರವಾಹ ಸಾಧ್ಯವಾಗಲಿದೆ. ಈ ಯೋಜನೆಯೊಂದಿಗೆ, ಆಂಧ್ರಪ್ರದೇಶದ ಡೇಟಾ ಸೆಂಟರ್ ಸಾಮರ್ಥ್ಯವನ್ನು ಮುಂದಿನ 5 ವರ್ಷಗಳಲ್ಲಿ 6 ಗಿಗಾವಾಟ್ಗೆ ತಲುಪಿಸುವ ಗುರಿಯಿದೆ. ಈಗಾಗಲೇ 1.6 ಗಿಗಾವಾಟ್ ಯೋಚನೆಗಾಗಿ ಹೂಡಿಕೆದಾರರಿಂದ ದೃಢೀಕರಣ ದೊರೆತಿದೆ. ಆರ್ಥಿಕ ಪ್ರಭಾವ ಮತ್ತು ಉದ್ಯೋಗ ಸೃಷ್ಟಿಈ ಯೋಜನೆಯು ವಿಜ್ಞಾನ, ಐಟಿ, ಡೇಟಾ ಇಂಜಿನಿಯರಿಂಗ್ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗಗಳನ್ನು ನೀಡಲಿದ್ದು, ಸ್ಥಳೀಯ ಅಭಿವೃದ್ಧಿಗೆ ಬಹುಮಾನವಾಗಲಿದೆ. ವಿಶಾಖಪಟ್ಟಣವನ್ನು ಭಾರತದಲ್ಲಿ ಮುಂದಿನ AI ಮತ್ತು ಕ್ಲೌಡ್ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸಲು ಈ ಯೋಜನೆ ಪಾಯಿಂಟ್ ಆಗಲಿದೆ. ಗುಗಲ್ನ ಈ ಹೂಡಿಕೆ ಇತರ ಜಾಗತಿಕ ಕಂಪನಿಗಳಿಗೂ ದಾರಿ ತೆರೆದಿರುವಂತಹದ್ದಾಗಿದೆ. ಸಾರಾಂಶದ ಟೇಬಲ್ಅಂಶ ವಿವರಸ್ಥಳ ವಿಶಾಖಪಟ್ಟಣ, ಆಂಧ್ರಪ್ರದೇಶಹೂಡಿಕೆ ಮೊತ್ತ $6 ಬಿಲಿಯನ್ಸಾಮರ್ಥ್ಯ 1 ಗಿಗಾವಾಟ್ ಡೇಟಾ ಸೆಂಟರ್ಹಸಿರು ಶಕ್ತಿ $2 ಬಿಲಿಯನ್ ಸೌರ/ಪವನ್ ಶಕ್ತಿ ಯೋಜನೆಗಳಿಗೆಉದ್ದೇಶ 2030ರೊಳಗೆ ಕಾರ್ಬನ್ ಮುಕ್ತ ಶಕ್ತಿ ಬಳಕೆಆರ್ಥಿಕ ಪ್ರಭಾವ ಸಾವಿರಾರು ಉದ್ಯೋಗಗಳು, ತಂತ್ರಜ್ಞಾನ ಹೂಡಿಕೆ ಹೆಚ್ಚಳಕೇಬಲ್ ಸಂಪರ್ಕ 3 ಅಂತಾರಾಷ್ಟ್ರೀಯ ಕೇಬಲ್ ಲ್ಯಾಂಡಿಂಗ್ ಪಾಯಿಂಟ್ಗಳು
ಕಾರವಾರ ಬ್ರೇಕಿಂಗ್
ಕಾಡಿನಿಂದ ನಾಡಿಗೆ ಬಂದು ಪಾಲ್ಮ್ ಸಿವಿಟ್ ಕ್ಯಾಟ್ ದಾಂಡೇಲಿಯ ಗಾರ್ಮೆಂಟ್ ಶಾಪ್ ನಲ್ಲಿ ಸಿಕ್ತು ಕಾಡುಪ್ರಾಣಿ ಜೆಜೆ ಗಾರ್ಮೆಂಟ್ ಮಾಲೀಕರಾದ ಜಾನ್ ರವರಿಗೆ ಸಿಕ್ಕ ಅಪರೂಪದ ಕ್ಯಾಟ್ ಸ್ಥಳಕ್ಕೆ ಉರಗ ಪ್ರೇಮಿ ರಜಾಕ್ ಶಾಹ್ ಭೇಟಿ.. ಸುರಕ್ಷಿತವಾಗಿ ಅರಣ್ಯಾಧಿಕಾರಿಗೆ ತಲುಪಿಸಿದ ರಜಾಕ್ ಶಾಹ್ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣ
ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವಕ್ಕಾಗಿ ಹುಡುಕಾಟ
ಬೀದರ್ ಬ್ರೇಕಿಂಗ್ ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವಕ್ಕಾಗಿ ಹುಡುಕಾಟ ಬೀದರ್ ನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ತನಿಖೆ ನಡೆಯುತ್ತಿದೆ, ವರದಿ ಬಂದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಆರೋಪಗಳು – ಪ್ರತ್ಯಾರೋಪಗಳು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ತನಿಖೆಯಲ್ಲಿ ಒಳ್ಳೆ ಅಧಿಕಾರಿಗಳಿದ್ದಾರೆ, ಈ ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. *ಚುನಾವಣೆಯಲ್ಲಿ ಮತಗಳನ್ನತನದ ಆರೋಪದ ವಿಚಾರ* ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗ ಹಾಗೂ ಸ್ವಾಯತ್ತ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದೆ…. ಮತಗಳನ್ನು ಕದ್ದು ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವ ಕೆಲಸ ಮಾಡಿದ್ದಾರೆ.. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮತಗಳ ಏರು- ಪೆರು ನಡೆದಿರುವುದು ಸಂಶೋಧನೆಯಲ್ಲಿ ತಿಳಿದು ಬಂದಿದೆ… ಆದ್ದರಿಂದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆ.5 ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ…. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ನಾವು ನಿರಂತರ ಹೋರಾಟ ಮಾಡುತ್ತೇವೆ ಪಾರದರ್ಶಕವಾಗಿ ಚುನಾವಣೆ ನಡೆದರೆ ಜಾತ್ಯತೀತ ಶಕ್ತಿಗಳು ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮತಗಳ್ಳತನ್ನದ ಆರೋಪ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ ಖಂಡ್ರೆ ಬೈಟ್ :- ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
ಅಳ್ವೆಕೋಡಿ ತೀರದಲ್ಲಿ ದೋಣಿ ಮಗುಚಿ ಮೀನುಗಾರನ ಶವ ಪತ್ತೆ; ಇನ್ನೂ ಮೂವರು ನಾಪತ್ತೆ
ಭಟ್ಕಳ ತಾಲೂಕಿನ ಅಳ್ವೆಕೋಡಿ ತೀರದಲ್ಲಿ ನಿನ್ನೆ ಸಂಭವಿಸಿದ ದೋಣಿ ಅಪಘಾತದಲ್ಲಿ ನಾಪತ್ತೆಯಾಗಿದ್ದ ಒಬ್ಬ ಮೀನುಗಾರನ ಶವ ಇಂದು ಪತ್ತೆಯಾಗಿದೆ. ಮಧ್ಯಾಹ್ನ ಹೊನ್ನೆಗದ್ದೆ ಕಡಲತೀರದಲ್ಲಿ ಮೃತದೇಹ ತೇಲಿಬಂದಿದ್ದು, ಸ್ಥಳೀಯ ಮೀನುಗಾರರು ಶವವನ್ನು ಮೇಲಕ್ಕೆ ಎತ್ತಿದ್ದಾರೆ. ಮೃತ ವ್ಯಕ್ತಿಯು ಜಾಲಿಯ ರಾಮಕೃಷ್ಣ ಮೊಗೇರ ಎನ್ನಲಾಗಿದೆ. ಬೆಳಗ್ಗೆಯಿಂದಲೇ ಅಳ್ವೆಕೋಡಿ ಹಾಗೂ ಮುಂಡಳ್ಳಿ ತೀರದಲ್ಲಿ ನೂರಾರು ಚಿಕ್ಕ ದೋಣಿಗಳು ಮತ್ತು ನಾಡದೋಣಿಗಳು ನಾಪತ್ತೆಯಾದ ಮೀನುಗಾರರ ಶೋಧ ಕಾರ್ಯದಲ್ಲಿ ತೊಡಗಿವೆ. ದೋಣಿ ಮಗುಚಿದ ಸ್ಥಳದ ಆವರಣದಲ್ಲಿ ಶೋಧ ಮುಂದುವರಿದಿದೆ. ಇನ್ನೂ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ — ಸತೀಶ ಮೊಗೇರ, ಗಣೇಶ ಮೊಗೇರ ಮತ್ತು ನಿಶ್ಚಿತ ಮೊಗೇರ. ಇವರಿಗಾಗಿ ಶೋಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಮೀನುಗಾರಿಕಾ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ್ದಾರೆ.