ಚಾಮರಾಜನಗರ ಕಾಂತಾರ ಸಿನಿಮಾ ವೀಕ್ಷಣೆ ವೇಳೆ ಬಾಲಕಿಗೆ ದೈವಾವೇಶ! ಚಾಮರಾಜನಗರ ಜಿಲ್ಲೆ ಯಳಂದೂರಿನ ಮಹದೇಶ್ವರ ಚಿತ್ರಮಂದಿರದಲ್ಲಿ ಘಟನೆ ಸಿನಿಮಾದಲ್ಲಿ ದೈವದ ದೃಶ್ಯ ಕಂಡುದೈವಾವೇಶದ ರೀತಿ ವರ್ತನೆ ಮೂರ್ನಾಲ್ಕು ಜನ ಹಿಡಿದುಕೊಂಡರು ನಿಲ್ಲದ ದೈವಾವೇಶದ ವರ್ತನೆ ಬಾಲಕಿಯ ವರ್ತನೆಗೆ ಪ್ರೇಕ್ಷಕರು ಅಚ್ಚರಿ ಕೆಲಕಾಲದ ಬಳಿಕ ಸಹಜ ಸ್ಥಿತಿಗೆ ಮರಳಿದ ಬಾಲಕಿ ಬಾಲಕಿಯ ದೈವಾವೇಶದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ನಾನು ಬಸವಣ್ಣನವರ ಅಭಿಮಾನಿ
ನಾನು ಬಸವಣ್ಣನವರ ಅಭಿಮಾನಿ: ಬಸವ ತತ್ವದಲ್ಲಿ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ: ಸಿ.ಎಂ ಸಿದ್ದರಾಮಯ್ಯ ಅಂದಿಗಲ್ಲ – ಇಂದಿಗಲ್ಲ – ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ: ಸಿಎಂ ನಾವೆಲ್ಲರೂ ಶೂದ್ರರು: ಜಾತಿ ಯಾವುದಾದರೂ ಶೂದ್ರರೆಲ್ಲರೂ ಒಂದೇ: ಸಿ.ಎಂ ಅಭಿಮತ ಸಹಿಷ್ಣುತೆ-ಸಹಬಾಳ್ವೆ ಬಸವಣ್ಣನವರ ಮತ್ತು ನನ್ನ ಬದುಕಿನ ಬದ್ದತೆ: ಸಿಎಂ ಚಲನೆ ಇಲ್ಲದ ಜಾತಿ ವ್ಯವಸ್ಥೆ ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನೇ ಸ್ಥಾಪಿಸಿದರು: ಸಿ.ಎಂ ಸಿದ್ದರಾಮಯ್ಯ ಬೆಂಗಳೂರು ಅ 5:ನಾವೆಲ್ಲರೂ ಶೂದ್ರರು. ಜಾತಿ ಯಾವುದಾದರೂ ಶೂದ್ರರೆಲ್ಲರೂ ಒಂದೇ.ಚಲನೆ ಇಲ್ಲದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನೇ ಸ್ಥಾಪಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ವಿಶ್ವಗುರು ಬಸವಣ್ಣ ಅವರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿದ್ಯದಲ್ಲಿ ಸಮುದಾಯದ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿಯ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ. ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ ಎಂದರು. ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕೆ ಎಂದರು. ಜಾತಿಯಿಂದ ಯಾರೂ ಶ್ರೇಷ್ಠರಲ್ಲ. ಹಾಗೆಯೇ ಪ್ರತಿಭೆ, ಜ್ಞಾನ ಕೂಡ ಯಾವುದೇ ಒಂದು ಜಾತಿಯ ಸ್ವತ್ತು ಅಲ್ಲ. ನಾನು ಅರ್ಜಿ ಹಾಕಿಕೊಂಡು ಕುರುಬ ಜಾತಿಯಲ್ಲಿ ಹುಟ್ಟಿಲ್ಲ. ನಾನು ಶೂದ್ರ ಎನ್ನುವ ಕಾರಣಕ್ಕೆ ಶಿಕ್ಷಣ ಪಡೆಯುವ ಅರ್ಹತೆ ಇಲ್ಲ ಎನ್ನುವುದು ಪಟ್ಟಭದ್ರರ ಷಡ್ಯಂತ್ರ ಎಂದರು. ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ. ಜಾತಿ ವ್ಯವಸ್ಥೆ, ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಜಾತಿ-ವರ್ಗ ರಹಿತ ಮಾನವ ಸಮಾಜದ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ನಾವೆಲ್ಲರೂ ಮೊದಲು ಮನುಷ್ಯರು, ಬಳಿಕ ಭಾರತೀಯರು. ಹೀಗಾಗಿ ನಾವು ಮನುಷ್ಯ ನಿರ್ಮಿತ ಜಾತಿ, ಧರ್ಮದ, ಅಸಮಾನತೆಯ ತಾರತಮ್ಯಗಳನ್ನು ಸಹಿಸಬಾರದು, ಆಚರಿಸಬಾರದು ಎಂದು ಕರೆ ನೀಡಿದರು. ನಾನು ಕಾನೂನು ವಿದ್ಯಾರ್ಥಿ ಆದ ಗಳಿಗೆಯಿಂದ ನಾನು ಬಸವಣ್ಣನವರ ಅನುಯಾಯಿ. ಅಂಬೇಡ್ಕರ್ ಅವರೂ ತಮ್ಮ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳನ್ನೇ ಹೇಳಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ. ನಮ್ಮ ಸರ್ಕಾರ ಸಂವಿಧಾನದ ಪೀಠಿಕೆ ಓದಿಸುವುದನ್ನು ಅಭಿಯಾನದ ರೀತಿ ನಡೆಸುತ್ತಿದ್ದೇವೆ ಎಂದರು. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯ ಆದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿಗೂ ಪ್ರಸ್ತುತ ಎಂದರು. ಬಸವಣ್ಣನವರು ನುಡಿದಂತೆ ನಡೆದರು. ನಾವು ಬಸವ ಅನುಯಾಯಿಗಳೂ ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿ ಗಳಾಗುತ್ತೇವೆ ಎಂದರು. ನಮ್ಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ನಾವೆಲ್ಲರೂ ಶೂದ್ರರು. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು. ಶೂದ್ರರು ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು ಎಂದರು. ಈ ಅಸಮಾನತೆ ಹೋಗದಿದ್ದರೆ, ಅಸಮಾನತೆಗೆ ಒಳಗಾಗಿರುವ ಸಮುದಾಯಗಳು ಸ್ವಾತಂತ್ರ್ಯ ಸೌಧವನ್ನು ದ್ವಂಸ ಮಾಡುತ್ತಾರೆ ಎನ್ನುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳನ್ನು ನಾವು ನೆನಪಿಡಬೇಕು ಎಂದರು. ಮುಂದಿನ ವರ್ಷ ವಚನ ವಿಶ್ವ ವಿದ್ಯಾಲಯ ಸ್ಥಾಪನೆ: ಸಿಎಂ ವಚನ ವಿಶ್ವ ವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ “ಬಸವ ಮೆಟ್ರೋ” ಎಂದು ಘೋಷಿಸಿ ಬಿಡುತ್ತಿದ್ದೆ ಎಂದರು. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಉಪಸ್ಥಿತರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶರಣ ಸಂಸ್ಕೃತಿ ಬಗೆಗಿನ ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ನನ್ನ ಸಾವಿಗೆ ಕರ್ನಾಟಕ ಸರ್ಕಾರ, ಸಿಎಂ, ಉನ್ನತ ಶಿಕ್ಷಣ ಸಚಿವರೇ ಕಾರಣ
ಚಿಕ್ಕೋಡಿ ಬ್ರೇಕಿಂಗ್ Exclusive ನಾನು ಆತ್ಮಬಲಿದಾನಕ್ಕೆ ಸಿದ್ಧನಾಗಿದ್ದೇನೆ ನನ್ನ ಸಾವಿಗೆ ಕರ್ನಾಟಕ ಸರ್ಕಾರ, ಸಿಎಂ, ಉನ್ನತ ಶಿಕ್ಷಣ ಸಚಿವರೇ ಕಾರಣ ಸಂಚಲನ ಮೂಡಿಸಿದ ಅತಿಥಿ ಉಪನ್ಯಾಸಕನ ಆತ್ಮಹತ್ಯೆ ಪತ್ರ ಆತ್ಮಹತ್ಯೆ ಪತ್ರ ಬರೆದು ನಾಪತ್ತೆಯಾಗಿರುವ ಅತಿಥಿ ಉಪನ್ಯಾಸಕ ಚಿಕ್ಕೋಡಿಯ ಅತಿಥಿ ಉಪನ್ಯಾಸಕನಾದ ನೇಮಿನಾಥ ತಪಕಿರೆ ಈಗಾಗಲೇ ಉಪನ್ಯಾಸಕನ ಶೋಧ ಕಾರ್ಯಾ ಮಾಡುತ್ತಿರುವ ಚಿಕ್ಕೋಡಿ ಪೋಲಿಸ್ ಕಳೆದ ೬ ದಿನಗಳಿಂದ ಶಿಕ್ಷಕ ನೇಪಿನಾಥ ತಪಿಕಿರೆಗಾಗಿ ಹುಡುಕಾಟ ಈ ಹಿಂದೆ ಕೂಡ ಸಂಕಷ್ಟ ಎದುರಾಗಿದ್ದರಿಂದ ನಾಪತ್ತೆಯಾಗಿ ಮತ್ತೆ ಮರಳಿದ್ದ ಉಪನ್ಯಾಸಕ ಕಳೆದ ೮ ವರ್ಷದಿಂದ ಅತಿಥಿ ಉಪನ್ಯಾಸಕನಾಗಿ ಸೇವೆ ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಭದ್ರತೆ ಇಲ್ಲ ರಾಜ್ಯದ್ಯಾಂತ ಅತಿಥಿ ಶಿಕ್ಷಕರಿಂದ ಸರ್ಕಾರದ ಮೇಲೆ ಒತ್ತಡ ಹಲವಾರು ವರ್ಷಗಳಿಂದ ಈಡೇರಿಕೆ ಆಗದ ಬೇಡಿಕೆ ಮನನೊಂದು ಕಾಣೆಯಾದ ನೇಮಿನಾಥ ನನ್ನ ಸಾವಿನಿಂದ ನಿಮ್ಮ ಹೋರಾಟ ತೀವ್ರವಾಗಲಿ ಎಂದು ಪತ್ರ ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹಿಂದೂಸ್ತಾನಿ ಸಂಗೀತ ಉತ್ಸವ ೨೦೨೫
೨೦ನೇ ‘ಧ್ವನಿ’ – ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ ೨೦೨೫ ಆಯೋಜನೆ : ಬೆಂಗಳೂರು ಕಿಡ್ನಿ ಫೌಂಡೇಷನ್ಖ್ಯಾತ ವಯೋಲಿನ್ ವಾದಕಿ ಡಾ.ಎನ್.ರಾಜಂ ರವರಿಗೆ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಪ್ರಶಸ್ತಿ ಪ್ರದಾನ ಧ್ವನಿ ಸಂಗೀತ ಸಂಭ್ರಮದಲ್ಲಿ ಬೆಂಗಳೂರಿನ ಕೆ.ಆರ್. ರಸ್ತೆಯ ಬೆಂಗಳೂರು ಗಾಯನ ಸಮಾಜದಲ್ಲಿ ಶಾಸ್ತ್ರೀಯ ಸಂಗೀತ ಅಮೂಲ್ಯ ಸೇವೆಗಾಗಿ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ ವಿದುಷಿ ಡಾ. ಎನ್. ರಾಜಮ್ ಅವರಿಗೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಲ್ಲಿಕಾರ್ಜುನ್ ಮನ್ಸೂರ್ ಅವರ ಕಂಚಿನ ಪ್ರತಿಮೆ, ೧ ಲಕ್ಷ ನಗದು, ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.ಟ್ರಸ್ಟಿಗಳಾದ ಡಾ.ಪಿ.ಶ್ರೀರಾಮ್ ಮತ್ತು ಪಿ.ಶ್ರೀನಿವಾಸ್ ವೇದಿಕೆಯಲ್ಲಿದರು. ಸುಧಾಕರ್ ರಾವ್ ಮಾತನಾಡಿ,ಬೆಂಗಳೂರು ಕಿಡ್ನಿ ಪೌಂಡೇಶನ್ ಕಿಡ್ನಿ ವೈಫಲ್ಯ ಇದ್ದವರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ಮತ್ತು ಕಿಡ್ನಿ ದಾನ ಮಾಡುವ ಕಾರ್ಯ ಮಾಡುತ್ತಿದೆ.ಇದು ಶ್ಲಾಘನೀಯ, ಮಲ್ಲಿಕಾರ್ಜುನ ಮನ್ಸೂರ್ ಅವರು ಕೂಡ ಬಿಕೆಎಫ್ ಪೌಂಡೇಶನ್ ನಿಂದ ಸೇವೆ ಪಡೆದಿದ್ದರು.ಅವರ ಸಾವಿನ ಬಳಿಕ ಕಿಡ್ನಿ ವೈಫಲ್ಯ ಹೊಂದಿರುವವರಿಗೆ ನೆರವು ನೀಡಲು ಅವರ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಮಾಡಲಾತ್ತಿರುವುದು ಶ್ಲಾಘನೀಯ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಿಟೀಲು ತ್ರಿಮೂರ್ತಿಗಳಾದ ವಿದುಷಿ ಡಾ.ಎನ್. ರಾಜಮ್, ವಿದುಷಿ ಸಂಗೀತ ಶಂಕರ್, ರಾಗಿಣಿ ಮತ್ತು ನಂದಿನಿ ಶಂಕರ್ ಅವರೊಂದಿಗೆ ಪಂಡಿತ್ ಶುಭ್ ಮಹಾರಾಜ್ ಮತ್ತು ಪಂಡಿತ್ ಅಭಿಷೇಕ್ ಮಿಶ್ರಾ ತಬಲಾದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೀರಾ ಕುರಿತು ಶ್ರೀಮತಿ ವಿಶಾಖಾ ಹರಿ ಅವರ ಸಂಗೀತ ಪ್ರವಚನ- ಹರಿಕಥೆ, ಜುಗಲ್ಬಂದಿ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲಿನಲ್ಲಿ, ಪಂಡಿತ್ ಜಯತೀರ್ಥ ಮೇವುಂಡಿ ಗಾಯನ ಮತ್ತು ಪಂಡಿತ್ ರಾಜೇಂದ್ರ ನಕೋಡ್ ತಬಲಾದಲ್ಲಿ ಜನಮನ ರಂಜಿಸಿದರು ಕರ್ನಾಟಕ ರಾಜ್ಯದಲ್ಲಿ ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಪಿಂಡ ಕಾಯಿಲೆಗಳ ಚಿಕಿತ್ಸೆಯಲ್ಲಿ ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ಮುಂಚೂಣಿಯಲ್ಲಿದೆ. ಈ ಟ್ರಸ್ಟ್ ೧೯೭೯ ರಲ್ಲಿ ಸ್ಥಾಪನೆಯಾಯಿತು ಮತ್ತು ಆರ್ಥಿಕ ಕೆಳಸ್ತರಗಳಲ್ಲಿನ ರೋಗಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಮೂತ್ರಪಿಂಡ ಆರೋಗ್ಯ ಸೇವೆಯನ್ನು ಒದಗಿಸುವ ನೋಡಲ್ ಕೇಂದ್ರವಾಗಿ ವಿಕಸನಗೊಂಡಿದೆ.ಕೈಗೆಟುಕುವ ಡಯಾಲಿಸಿಸ್ಗಾಗಿ ೮೦+ ಡಯಾಲಿಸಿಸ್ ಯಂತ್ರಗಳನ್ನು ಹೊಂದಿರುವ ಹೊಸ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರವನ್ನು ನಿರ್ಮಿಸಲಾಗಿದೆ. ಇದು ಡಯಾಲಿಸಿಸ್ ತಂತ್ರಜ್ಞರಿಗೆ ತರಬೇತಿ ಕೇಂದ್ರವನ್ನು ಸಹ ಪ್ರಾರಂಭಿಸುತ್ತಿದೆ. ಬಿಕೆಎಫ್ ಕಳೆದ ಮೂರು ವರ್ಷಗಳಿಂದ ೨೦ ಗ್ರಾಮೀಣ ಡಯಾಲಿಸಿಸ್ ಕೇಂದ್ರಗಳೊಂದಿಗೆ ಸಹಯೋಗ ಹೊಂದಿದ್ದು, ಆಯಾ ಪ್ರದೇಶಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಸುಲಭ ಮತ್ತು ಗುಣಮಟ್ಟದ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ.ಪ್ರತಿ ವರ್ಷ, ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ಪ್ರಸಿದ್ಧ ಹಿಂದೂಸ್ತಾನಿ ಗಾಯಕ ದಿವಂಗತ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರು ಬಿಕೆಎಫ್ ಜೊತೆ ಹೊಂದಿದ್ದ ಸಂಬಂಧದ ನೆನಪಿಗಾಗಿ ‘ಧ್ವನಿ’ – ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವವನ್ನು ನಡೆಸುತ್ತದೆ. ಈ ಸಂಗೀತ ಕಾರ್ಯಕ್ರಮದ ಆದಾಯವು ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬಿಕೆಎಫ್ ತನ್ನ ಉದ್ದೇಶಗಳನ್ನು ಪೂರೈಸುವಂತೆ ಮಾಡುವ ಕಾರ್ಪಸ್ಗೆ ಸೇರಿಸುತ್ತದೆ. ಈ ವರ್ಷ, ೨೦ನೇ ಧ್ವನಿಯಿಂದ ಬರುವ ಆದಾಯವನ್ನು ಗ್ರಾಮೀಣ ಡಯಾಲಿಸಿಸ್ ಕೇಂದ್ರಗಳಿಂದ ರೋಗಿಗಳಿಗೆ ಕೈಗೆಟುಕುವ ಡಯಾಲಿಸಿಸ್ ಒದಗಿಸಲು ಬಳಸಲಾಗುತ್ತದೆ ಎಂದು ಪ್ರಾಸ್ತವಿಕ ನುಡಿಯಲ್ಲಿ ಬಿಕೆಎಫ್ ಟ್ರಸ್ಟಿ ಸುಧೀರ್ ಶೆಣೈ ತಿಳಿಸಿದರು.
ಕೊಪ್ಪಳದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿಕೆ
ಕೊಪ್ಪಳ ಕೊಪ್ಪಳದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿಕೆ. ಸಹೋದರ ಸಂಸದ ರಾಜಶೇಖರ ಹಿಟ್ನಾಳರ ಪ್ರೇರಣಾ ಸಂಸ್ಥೆಯಿಂದ ಜಿಲ್ಲಿಕಲ್ಲು ಖರೀದಿ ಮಾಡಲು ಒತ್ತಡ. ಗುತ್ತಿಗೆದಾರರು ಕ್ರಷರ್ ಮಾಲೀಕರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 67 ಕ್ರಷರ್ ಮಿಷನ್ ಗಳಿದ್ದವು. ಈಗ 43ಕ್ಕೆ ಇಳಿದಿವೆ ಕ್ರಷರ್ ಮಿಷನ್ ವಿದ್ಯುತ್ ಬಿಲ್. ಕೂಲಿ ಹಣ ನೀಡಲು ಸಮಸ್ಯೆಯಾಗಿದೆ ಈ ಕಾರಣಕ್ಕೆ ಕ್ರಷರ್ ಮಾಲೀಕರು ಒಂದೇ ಕಡೆ ಖರೀದಿಸುವ ಕ್ರಮಕ್ಕೆ ಬಂದಿದ್ದಾರೆ ಇದನ್ನು ರಾಜಕೀಯಕ್ಕಾಗಿ ಬಳಕೆ ಮಾಡುವುದು ಬೇಡ ಮರಳನ್ನು ಹಣ ಕೊಟ್ಟು ಖರೀದಿಸುತ್ತಾರೆ ಕಂಕರ ಮಾತ್ರ ಉದ್ರಿ ತೆಗೆದುಕೊಳ್ಳುತ್ತಾರೆ ಇಲ್ಲಿ ಸಾಧ್ಯವಾಗದಿದ್ದರೆ ಹೊರ ಜಿಲ್ಲೆಯಿಂದ ಖರೀದಿಸಲಿ. ಮಾಧ್ಯಮಗಳಿಗೆ ಮಾಹಿತಿ ನೀಡುವದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ಕುಳಿತು ಮಾತನಾಡುತ್ತೇವೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಿಡುವುದು ಹೈಕಮಾಂಡ ನಿರ್ಧಾರ ಯಾರು ಕೆಲಸ ಮಾಡುತ್ತಾರೆ ಎಂಬುವುದು ಅವರಿಗೆ ಗೊತ್ತಿದೆ. ನಾವು ಜನರ ಅಭಿವೃದ್ದಿ ಕೆಲಸ ಮಾಡುತ್ತೇವೆ ಸಚಿವರಾಗುವ ಆಕಾಂಕ್ಷಿ ಇರೋದ್ರಿಂದ ಜನಸೇವೆ ಮಾಡುತ್ತೇವೆ ನಾಳೆ ಕೊಪ್ಪಳದಲ್ಲಿ ಬೃಹತ್ ಸಮಾವೇಶ ಸಮಾವೇಶದಲ್ಲಿ ಸರಿಸುಮಾರು 1.50 ಲಕ್ಷ ಜನ ಸೇರುವ ನಿರೀಕ್ಷೆ ಜಿಲ್ಲೆಯಲ್ಲಿ 2500 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗೆ ಚಾಲನೆ ಕೊಪ್ಪಳದ 450. ಹಾಸುಗೆ ಆಸ್ಪತ್ರೆಸುಪರ ಸ್ಪೇಶಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಎಂ ಸಿದ್ದರಾಮಯ್ಯ, ಡಿ ಸಿಎಂ ಡಿ ಕೆ ಶಿವಕುಮಾರ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲ ಸೇರಿ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.
ಸಂಪುಟದಲ್ಲಿ ಸಚಿವರಾಗಲು ಶುದ್ಧ ಚಾರಿತ್ರ್ಯದ ಅಗತ್ಯ
ಬೆಂಗಳೂರು,ಅ.5; ಸಂಪುಟದಲ್ಲಿ ಸಚಿವರಾಗಲು ಶುದ್ಧ ಚಾರಿತ್ರ್ಯದ ಅಗತ್ಯ ಇದೆ ಎಂದು ಹೇಳುವ ಮೂಲಕ ಸಂಸದ ಇ.ತುಕಾರಾಂ, ಸಚಿವ ಜಮೀರ್ ಅಹಮದ್ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಲ್ಲಿ ಜವಾಹರ್ಲಾಲ್ ನೆಹರು ಅವರ ಕಾಲದಿಂದಲೂ ಹೈಕಮಾಂಡ್ ಸಂಸ್ಕೃತಿಯಿದೆ. ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗಲೂ ಇದು ಜಾರಿಯಲ್ಲಿತ್ತು. ಸಂಪುಟ ಸೇರ್ಪಡೆಯ ಬಗ್ಗೆ ಹಿರಿಯ ವರಿಷ್ಠ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ಹಂತದಲ್ಲಿ ಈ ವಿಚಾರಗಳು ನಿರ್ಧಾರವಾಗುವುದಿಲ್ಲ ಎಂದರು. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಾಗ ಸರ್ಕಾರಕ್ಕೆ ಯಾರಿಂದ ಒಳ್ಳೆಯದಾಗಲಿದೆ. ಯಾರಿಗೆ ಕ್ಲೀನ್ ಇಮೇಜಿದೆ, ಪಕ್ಷಕ್ಕೆ ಯಾರು ನಿಷ್ಠರಾಗಿದ್ದಾರೆ ಎಂಬ ವಿಷಯಗಳನ್ನು ಪರಾಮರ್ಶಿಸಲಾಗುತ್ತದೆ ಎಂದರು. ಪಕ್ಷ ಮತ್ತು ಆಡಳಿತಕ್ಕೆ ಒಳ್ಳೆಯ ಹೆಸರು ಬರಬೇಕು ಎಂದರೆ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಕಿರೀಟದಲ್ಲಿರುವ ವಜ್ರದಂತೆ ಶುದ್ಧವಾಗಿರಬೇಕು. ಸಚಿವ ಜಮೀರ್ ಅಹಮದ್ಖಾನ್ ಹೇಳಿಕೆ ನೀಡಿ, ಬಿ.ನಾಗೇಂದ್ರ ಮತ್ತೆ ಸಚಿವರಾಗುತ್ತಾರೆ ಎಂದಿರುವುದು ಸಂಪೂರ್ಣ ವೈಯಕ್ತಿಕ ಹೇಳಿಕೆ. ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಬಿ. ನಾಗೇಂದ್ರ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಹಗರಣದ ಆರೋಪಕ್ಕೆ ಗುರಿಯಾಗಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳುವಪ್ರಯತ್ನಗಳು ನಡೆಯುತ್ತಿವೆ. ಈ ಹಂತದಲ್ಲಿ ಅದೇ ಜಿಲ್ಲೆಯ ಸಂಸದರು ಆಗಿರುವ ತುಕಾರಾಂ, ಸಂಪುಟಕ್ಕೆ ಸೇರಲು ಶುದ್ಧ ಚಾರಿತ್ರ್ಯ ಅಗತ್ಯವಿದೆ ಎಂದು ಹೇಳುವ ಮೂಲಕ ಬಿ. ನಾಗೇಂದ್ರ ಅವರ ಸೇರ್ಪಡೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಅವರ ಸರ್ಕಾರ 5 ವರ್ಷಗಳ ಕಾಲ ಹೆಚ್ಚು ಸಕ್ರಿಯವಾಗಿ, ಚುರುಕಾಗಿ ಜನಪರ ಕೆಲಸಗಳನ್ನು ಮುಂದುವರೆಸಲಿ ಎಂದು ಅವರು ಹೇಳಿದರು.
ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣ
ಚಾಮರಾಜನಗರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣ. ನಾಲ್ವರು ಆರೋಪಿಗಳ ಬಂಧನ ನಾಲ್ವರು ಆರೋಪಿಗಳಿಗೆ ಮೆಡಿಕಲ್ ಟೆಸ್ಟ್. ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್. ನ್ಯಾಯಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ. ಪಚ್ಚೆಮಲ್ಲು,ಗಣೇಶ,ಗೋವಿಂದರಾಜು, ಶಂಪು ಸೇರಿ ನಾಲ್ವರಿಗೆ ಟೆಸ್ಟ್. ಹಸುವಿನ ಮಾಲೀಕ ಚಂದು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ. ಅಲ್ಲದೇ ಮಂಜುನಾಥ್, ಕಂಬಣ್ಣ ಎಂಬ ಕುರಿಗಾಹಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಅರಣ್ಯಾಧಿಕಾರಿಗಳು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ.
ಕೊಪ್ಪಳ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ. ಕೊಪ್ಪಳದದಲ್ಲಿ ಸಿಎಮ್ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ. ಸಿಎಮ್ ಬದಲಾವಣೆ ವಿಚಾರ ಮಾತಾಡಬಾರದು ಎಂದು ಹೈಕಮಾಂಡ್ ಹೇಳಿದೆ. ಮುಖ್ಯಮಂತ್ರಿ ಆಯ್ಕೆ ಮಾಡೋದು ಪಕ್ಷ,ಹೈಕಮಾಂಡ್ ಶಾಸಕರ ಅಭಿಪ್ರಾಯ ಸಿಎಮ್ ಆಯ್ಕೆ ಮಾಡೋದು. ಸಿದ್ದರಾಮಯ್ಯಗೆ ನಾವ ವೋಟ್ ಹಾಕಿದ್ದು ಐದು ವರ್ಷ. ಮದ್ಯದಲ್ಲಿ ಬಿಟ್ಟು ಹೋಗಿ ಅಂತಾ ಹೇಳಿಲ್ಲ. ಡಿಕೆ ಶಿವಕುಮಾರ್ ಸಿಎಮ್ ಆಗಬೇಕು ಎಂದು ಕೆಲವರ ಹೇಳಿಕೆ ವಿಚಾರ. ಆಗಲಿ,ನಾನು ಸಿಎಮ್ ಆಗಬೇಕೆಂದು ಕೆಲವರು ಹೇಳ್ತಾರೆ. ನಾನೇನು ಕಮ್ಮಿ ಇದೆನಾ?ಅವರು ಎಷ್ಟು ಸಲ ಗೆದ್ದಿದ್ದಾರೆ,ನಾನು ಅಷ್ಟೆ ಸಲ ಗೆದ್ದಿದ್ದೀನಿ. ಪರೋಕ್ಷವಾಗಿ ಡಿಸಿಎಮ್ ಗೆ ಟಾಂಗ್ ಕೊಟ್ರಾ ಬಸವರಾಜ್ ರಾಯರೆಡ್ಡಿ. ನಾನು 1985 ರಿಂದ ಶಾಸಕ ಎಂದ ಬಸವರಾಜ್ ರಾಯರೆಡ್ಡಿ. ಅಭಿಮಾನಕ್ಕೆ ಕೆಲವರು ಹೇಳ್ತಾರೆ ಎಂದ ರಾಯರೆಡ್ಡಿ. ಅದು ಪಕ್ಷಕ್ಕೆ ಬಿಟ್ಟ ವಿಚಾರಸಿದ್ದರಾಮಯ್ಯ ಐದು ವರ್ಷ ಸಿಎಮ್ ಆಗಿ ಇರ್ತಾರೆ ಎಂದು ನಾನು ತಿಳಿದುಕೊಂಡಿದ್ದೇನೆ. ನವೆಂಬರ್ ಕ್ರಾಂತಿ ಇಲ್ಲ,ನಮ್ದು ಶಾಂತಿ ಎಂದ ರಾಯರೆಡ್ಡಿ. ಸಮೀಕ್ಷೆಗೆ ಡಿಕೆ ಶಿವಕುಮಾರ್ ಆಕ್ಷೇಪ ವಿಚಾರ ಡಿಕೆ ಶಿವಕುಮಾರ್ ಹೇಳಿದ್ರಲ್ಲಿ ತಪ್ಪಿಲ್ಲ. ಅದರೆ ಅನಿವಾರ್ಯ ಎಂದ ರಾಯರೆಡ್ಡಿ. ಜಾಸ್ತಿ ಪ್ರಶ್ನೆ ಕೇಳಿದ್ರೆ ಮತ್ತೊಂದು ಸರ್ವೆ ಮಾಡೋದು ತಪ್ಪತ್ತೆ. ನಮ್ಮ ಕ್ಷೇತ್ರದ ಯಲಬುರ್ಗಾ ಕುಕನೂರ,ಕನಕಗಿರಿ ಕಾರಟಗಿ 100 ಕ್ಕೂ100 ಸರ್ವೆ ಮುಗದಿದೆ. ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಎಂದ ರಾಯರೆಡ್ಡಿ.. ಇದು ಜಾತಿ ಗಣತಿ ಅಲ್ಲ,ಸಾಮಾಜಿಕ ಶೈಕ್ಷಣಿಕ ಗಣತಿ. ನನಗೆ ಯಾವದೇ ಜಾತಿ ಧರ್ಮ ಇಲ್ಲ ಎಂದ ರಾಯರೆಡ್ಡಿ. ನಾನು ಯಾವ ದೇವರನ್ನು ನಂಬಿಲ್ಲ ಐ ಹ್ಯಾವ್ ಮೈ ಒನ್ ಗಾಡ್,ಐ ಹ್ಯಾಮ್ ಮೈ ಒನ್ ರಿಲೀಜನ್ ಎಂದ ರಾಯರೆಡ್ಡಿ ಯಾರಾದರೂ ನನ್ನ ಧರ್ಮಕ್ಕೆ ಬರ್ತಿದ್ದರೆ ಬಾ ಎಂದ ರಾಯರೆಡ್ಡಿ
ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠದಿಂದ ಹೊರಗೆ
ಮದಬಾವಿ ಗ್ರಾಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ. ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠದಿಂದ ಹೊರಗೆ ಹಾಕಿದ ವಿಚಾರ. ಅವರ ಬಗ್ಗೆ ಮಾತಾಡುತ್ತಾ ತಮ್ಮನ್ನು ಹೊರಗೆ ಹಾಕಿದ ಉದಾರಣೆ ಕೊಟ್ಟು ಮಾತಾಡಿದ ಯತ್ನಾಳ್. ಯಾವಾಗ ಒಬ್ಬ ವ್ಯಕ್ತಿಗೆ ಬೆಲೆ ಬರುತ್ತದೆ ಅಂದ್ರೆ. ಅವರನ್ನು ಹೊರ ಹಾಕಿದಾಗ. ಇವತ್ತು ತಿಪ್ಪೆಯಲ್ಲಿ ಇದ್ದರೂ ವಜ್ರ ವಜ್ರಾನೆ. ನನ್ನ ಹೊರ ಹಾಕಿದಾಗ ಅವರೇನು ತಿಳಿದುಕೊಂಡರು. ಹೊರ ಹಾಕಿವಿ ಮುಂದೆ ನಮ್ಮನ್ನು ಯಾವ ಹಳೆ ನಾಯಿ ಕೇಳುತ್ತದೆ ಅಂತ ಅಂದುಕೊಂಡರು. ನಾಳೆ ಸಂಜೆನೇ ಶಿವಮೊಗ್ಗಕ್ಕೆ ಹೊರಟಿದ್ದೇನೆ. ಮೊನ್ನೆ ಮದ್ದೂರಿಗೆ ಹೋಗಿದ್ದೆ ಮದ್ದೂರಿನಲ್ಲಿ ಯಾವ ನಮ್ಮ ಜಾತಿ ಜನ ಔಷಧಕ್ಕೂ ಸಿಗೋದಿಲ್ಲ. ಬರೆ ಇದನ್ನು ಹಾಕಿಕೊಂಡಿದ್ದೇನೆ ಕೇಸರಿ ಶಾಲನ್ನ ತೋರಿಸಿ ಹೇಳಿದ ಯತ್ನಾಳ್. ಎಷ್ಟು ಜನ ಸೇರ್ಬೇಕು ಮದ್ದೂರಲ್ಲಿ 20 ಸಾವಿರ ಜನ ಸೇರಿದ್ದರು. ಆದ್ದರಿಂದ ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ಒಂದೇ ಸಾಗುವಂತಾಗಬೇಕು ಎಂದ ಯತ್ನಾಳ್. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮದಬಾವಿ.
ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ
ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಸೃಷ್ಟಿ ಮಾಡಿದ್ದಾರೆ ಸುಮಾರು 1 ಗಂಟೆ 4 ನಿಮಿಷ ನನ್ನ ಮಾಹಿತಿ ಪಡೆದಿದ್ದಾರೆ ಇದೊಂದು ಅವೈಜ್ಞಾನಿಕ ಸಮೀಕ್ಷೆ ಆಗಿದೆ ತಾಂತ್ರಿಕ ಸಮಸ್ಯೆಯಿಂದ ಕೂಡಿದೆ ಇನ್ನೊಂದು ಕಾಂತರಾಜ್ ಸಮಿತಿ ಆಗುತ್ತೆ ಅಷ್ಟೇ 11 ವರ್ಷದಲ್ಲಿ ಮೋದಿಯವರು ಭಾರತದ ಅಭಿವೃದ್ಧಿ ಬಗ್ಗೆ ದಿಕ್ಸೂಚಿ ಕೊಟ್ಟಿದ್ದಾರೆ ಅನಾವಶ್ಯಕವಾಗಿ ಮಾಡುವ ಗೊಂದಲದಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ಕೊಡಲ್ಲ ಇದರಲ್ಲಿ ಸರ್ಕಾರ ಸಾಧನೆ ಮಾಡಲು ಯಾವುದು ಸಿಗಲ್ಲ ಅವೈಜ್ಞಾನಿಕ ಗಣತಿಯಿಂದ ಮಾಹಿತಿ ಸಿಗಲ್ಲ ಇದನ್ನು ಇನ್ನೂ ಸರಳಿಕರಣ ಮಾಡಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಸುಮಾರು ಅಧಿಕಾರಿಗಳು ಕೇಳಿದ ಮಾಹಿತಿ ಅನಾವಶ್ಯಕವಾಗಿತ್ತು ಇದರಿಂದ ಜನರು ಗೊಂದಲ ಆಗ್ತಾರೆ ಸಮೀಕ್ಷೆ ಸರಳಿಕರ ಮಾಡಿಸಿದ್ದರಾಮಯ್ಯಗೆ ವಿನಂತಿ ಮಾಡಿದ ಸೊಮಣ್ಣ ಇದನ್ನು ಮಾಡೋಕೆ 6 ತಿಂಗಳು ಬೇಕು ಇದು ಕಾಂತರಾಜ್ ಸಮಿತಿಗಿಂತಲು ಕೆಟ್ಟದಾಗಿ ಆಗುತ್ತೆ.. ಈ ಸರ್ಕಾರಕ್ಕೆ ಜಾತಿ ಬಿಟ್ಟಿರೆ ಬೇರೆ ಅವಶ್ಯಕತೆ ಇಲ್ಲ ಯಾವ ಸಮಾಜಕ್ಕೆ ಅನ್ಯಾಯ ಮಾಡಬೇಕು ಎಂಬುದು ನಿಮ್ಮ ತಲೆಯಲ್ಲಿ ಇದೆ ಸಿದ್ದರಾಮಯ್ಯರ ಬಗ್ಗೆ ಕಾಂಗ್ರೆಸ್ ಅವರೇ ಮಾತಾಡ್ತಾರೆ ಇದು ನಿಮಗೆ ಶೋಭೆ ತರಲ್ಲ ಈ ರೀತಿಯಲ್ಲಿ ಮಾಡೋಕೆ ಹೋದ್ರೆ ಒಂದು ವರ್ಷ ಆಗುತ್ತೆ ದಯವಿಟ್ಟು ಈಗಲೇ ರದ್ದುಗೊಳಿಸಿ ಸಿದ್ದರಾಮಯ್ಯ ಸಾಹೆಬ್ರೆ ಇನ್ನೂ ನಾವು ಕಲಿಯಬೇಕು ತಾಂತ್ರಿಕ ಸಲಹಾ ಸಮಿತಿ ಮಾಡಿ ಅವರಿಂದ ವರದಿ ಪಡೆದು ಇನ್ನು ಆರು ತಿಂಗಳು ಆಗಲ್ಲಿ ಇಷ್ಟು ಅನುಭವ ನನಗೆ ಇವತ್ತು ಆಗಿದೆ ಇದರಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಇದು ನಿಮಗೆ ಪಾಪದ ಹೊರ ಆಗಲಿದೆ